ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಟ್ವಿಸ್ಟ್ ಸಿಗುತ್ತಿದೆ.
ನಟ ದರ್ಶನ್ ಗೆ ಹಣ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪಮೇಯರ್ ಮೋಹನ್ ರಾಜ್ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಕೇಸ್‍ನಲ್ಲಿ ಮೂವರಿಗೆ ನೊಟೀಸ್ ಕೊಡಲಾಗಿದೆ. ಮಾಜಿ ಉಪಮೇಯರ್ ಮೋಹನ್ ರಾಜ್‍ಗೆ ನೊಟೀಸ್ ನೀಡಲಾಗಿದೆ .
ಪ್ರಕರಣ ಸಂಬಂಧ ವಿಚಾರಣೆಯ ವೇಳೆ ದರ್ಶನ್ ಗೆ 40 ಲಕ್ಷ ಹಣ ನೀಡಿದ ಆರೋಪ ಕೇಳಿಬಂದ ಹಿನ್ನೆಲೆ ಪೊಲೀಸರು ಮೋಹನ್ ರಾಜ್ ಗೆ ನೊಟೀಸ್ ನೀಡಿದ್ದರು. ಅಂತೆಯೇ ಇಂದು ಮೋಹನ್ ರಾಜ್ ಬಸವೇಶ್ವರನಗರ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಹಾಗೂ ಇದರ ಖರ್ಚಿಗಾಗಿ ಮೋಹನ್ ರಾಜ್ ಬಳಿ ನಟ ದರ್ಶನ್ 30 ಲಕ್ಷ ಹಣ ಪಡೆದಿದ್ದರು ಎಂಬ ಆರೋಪ ಕೇಳಿಬಂದಿದೆ.