ರಿಕವರಿ ಹಣ ದುರುಪಯೋಗ ಆರೋಪ: ಬಿಡದಿ ಪೊಲೀಸ್​ ಇನ್ಸ್​ಪೆಕ್ಟರ್ ಅಮಾನತು

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ರಿಕವರಿ ಹಣ ದುರುಪಯೋಗ ಆರೋಪ ಬಂದ ಹಿನ್ನೆಲೆ ಇನ್ಸ್​​ಪೆಕ್ಟರ್​ ಶಂಕರ್ ನಾಯಕ್ ವಿರುದ್ಧ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಅಮಾನತು ಆದೇಶ ಹೊರಡಿಸಿದ್ದಾರೆ.

ಮತ್ತೊಂದೆಡೆ ದೂರುದಾರ ಹರೀಶ್, ಇನ್ಸ್​​ಪೆಕ್ಟರ್ ಶಂಕರ್​ ನಡುವೆ ಮಧ್ಯವರ್ತಿಯಾಗಿದ್ದ ಲೋಕನಾಥ್​ನನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಸಿಸಿಬಿ ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಪ್ರಸ್ತುತ ಬಿಡದಿ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್ ಆಗಿದ್ದ ಶಂಕರ್ ನಾಯಕ್ ಅವರ ವಿರುದ್ಧ ಹಣ ದುರುಪಯೋಗ ಆರೋಪ ಕೇಳಿ ಬಂದಿದ್ದು. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು. FIR ದಾಖಲಾಗ್ತಿದ್ದಂತೆ ಶಂಕರ್ ಅವರು, ಕೋರ್ಟ್​​ನಿಂದ ತಡೆಯಾಜ್ಞೆ ತಂದಿದ್ದರು. ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಶಂಕರ್ ನಾಯಕ್​ ಸಸ್ಪೆಂಡ್​ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!