ಆದಾಯ ಮೀರಿ ಆಸ್ತಿ ಗಳಿಕೆ? ಗದಗ ಶಹರ ಪೊಲೀಸ್ ಠಾಣೆಯ ಸಿಪಿಐಗೆ ಶಾಕ್ ಕೊಟ್ಟ ಲೋಕಾಯುಕ್ತ

ಹೊಸದಿಗಂತ ವರದಿ ಗದಗ:

ನಗರದಲ್ಲಿ ಲೋಕಾಯುಕ್ತ ಪೊಲೀಸರು ಗದಗ ಶಹರ ಪೊಲೀಸ್ ಠಾಣೆಯ ಗದಗ ಶಹರ ಪೊಲೀಸ್ ಠಾಣೆಯ ಸಿಪಿಐಗೆ ಶಾಕ್ ಕೊಟ್ಟಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಡಿ.ಬಿ. ಪಾಟೀಲ ಮನೆ ಸೇರಿ ಹಲವೆಡೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಗದಗ ಶಹರ ಠಾಣೆ. ಶಿವಾನಂದ ನಗರದಲ್ಲಿರುವ ಮನೆ ಹಾಗೂ ಸಿಪಿಐ ಡಿ.ಬಿ ಪಾಟೀಲ್ ಗೆ ಸೇರಿದ ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳ ಮೇಲೂ ದಾಳಿ ನಡೆಸಿದ್ದು, ಸಿಪಿಐ ಡಿ.ಬಿ. ಪಾಟೀಲಗೆ ಸೇರಿದ ಏಳು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ.ಎಸ್ ಪಾಟೀಲ, ಸಿಪಿಐ ಪರಶುರಾಮ್ ಕವಟಗಿ ನೇತೃತ್ವದಲ್ಲಿ ಪರಿಶೀಲನೆ ನಡೆದಿದ್ದು, ಅನೇಕ ದಾಖಲೆಗಳು ಕಡತಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!