ಹೊಸದಿಗಂತ ವರದಿ ಬಾಗಲಕೋಟೆ :
ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾ ಮಟ್ಟ ದ ಸಮಾವೇಶದಲ್ಲಿ ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಸಭೆಯಿಂದ ಹೊರ ಹಾಕಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಸ್ವಲ್ಪಯ ಪಕ್ಷದ ಸಭೆಯಲ್ಲಿ ಗೊಂದಲವಾಯಿತು.ಬಳಿಕ ಅವರು ಕಾರ್ಯಕ್ರಮದಂದ ಹೊರ ಹೋದರು.
ಪಕ್ಷದ ಕಾರ್ಯಕ್ರಮ ಸೂಸೂತ್ರವಾಗಿ ನಡೆಯಬೇಕಾದರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಸಭೆಯಿಂದ ಹೊರಹಾಕಬೇಕು ಎಂದು ಸಭೆಯಲ್ಲಿ ಕಾರ್ಯಕರ್ತರು ಪಟ್ಟು ಹಿಡಿದು ಘೋಷಣೆ ಕೂಗಿದರು.
ನಂತರ ಶಾಸಕ ವೀರಣ್ಣ ಚರಂತಿಮಠವರು ಕೂಡ ಪಕ್ಷ ವಿರೋಧಿ ಚಟುವಟಿಕೆ ಮಾಡಿದರನ್ನು ಹೊರಹಾಕಲೇಬೇಕು ಎಂದು ಪಟ್ಟು ಹಿಡಿದರು.
ಡಾ.ಶೇಖರ ಮಾನೆ, ಶಂಭುಗೌಡ ಪಾಟೀಲ, ಚಂದ್ರಕಾಂತ ಕೇಸನೂರ ಅವರು ಸಭೆಯಿಂದ ಹೊರ ಹೋದ ಘಟನೆ ನಡೆಯಿತು. ನಂತರ ಸಭೆ ಸುಗಮವಾಗಿ ಜರುಗಿತು.