July 5, 2026
Sunday, July 5, 2026
spot_img

ನಟ ಆಮಿರ್ ಖಾನ್ 3ನೇ ಮದುವೆ: ಮುಂಬೈನ ಬಾಂದ್ರಾ ನಿವಾಸದಲ್ಲಿ ಗೌರಿ ಸ್ಪ್ರಟ್ ಜೊತೆ ಇಂದು ಸರಳ ವಿವಾಹ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್ ನಟ ಆಮಿರ್ ಖಾನ್ (61) ತಮ್ಮ ಬಹುದಿನಗಳ ಗೆಳತಿ ಗೌರಿ ಸ್ಪ್ರಟ್‌ರೊಂದಿಗೆ ಇಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಸರಳವಾಗಿ ವಿವಾಹವಾಗುತ್ತಿದ್ದಾರೆ. ಯಾವುದೇ ಅದ್ದೂರಿ ಆಡಂಬರವಿಲ್ಲದೆ, ಕೇವಲ ಆಪ್ತರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ.

ಆಪ್ತರಿಗಷ್ಟೇ  ಆಹ್ವಾನ

ಈ ಆಪ್ತ ಸಮಾರಂಭದಲ್ಲಿ ಕೇವಲ ಎರಡೂ ಕುಟುಂಬಗಳ ಸದಸ್ಯರು ಮತ್ತು ಅತ್ಯಂತ ಹತ್ತಿರದ ಸ್ನೇಹಿತರು ಸೇರಿದಂತೆ ಒಟ್ಟು 100 ರಿಂದ 150 ಜನರಿಗಷ್ಟೇ ಆಹ್ವಾನ ನೀಡಲಾಗಿದೆ.  ಮದುವೆಯಲ್ಲಿ ಆಮಿರ್ ಖಾನ್ ಮೊದಲ ಪತ್ನಿಯರು ಮತ್ತು ಮಕ್ಕಳಾದ ಜುನೈದ್ ಖಾನ್, ಇರಾ ಖಾನ್, ಆಜಾದ್ ರಾವ್ ಖಾನ್ ಹಾಗೂ ಗೌರಿ ಸ್ಪ್ರಟ್ ಮೊದಲ ಮಗ ಪಾಲ್ಗೊಳ್ಳಲಿದ್ದಾರೆ.

ನಟ ಆಮಿರ್ ಖಾನ್ ಇಚ್ಛೆಯಂತೆ ಯಾವುದೇ ಅದ್ದೂರಿ ಬಾಲಿವುಡ್ ರಿಸೆಪ್ಷನ್ ಪಾರ್ಟಿ ಇರುವುದಿಲ್ಲ. ಮದುವೆಯ ನಂತರ ಆಪ್ತರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:

ಬೆಂಗಳೂರು ಮೂಲದ ಗೌರಿ ಸ್ಪ್ರಟ್ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಜೋಡಿಯು 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು, ಆದರೆ 2023 ರಿಂದ ಇಬ್ಬರ ನಡುವೆ ಪ್ರೀತಿ ಮರುಕಳಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !