ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹುಡುಗರು ಸಿನಿಮಾದ ನಟಿ ಅಭಿನಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುನೀತ್ ರಾಜ್‌ಕುಮಾರ್ ಅಭಿನಯದ ಹುಡುಗರು ಸಿನಿಮಾದಲ್ಲಿ ಅಪ್ಪು ತಂಗಿ ಪಾತ್ರದಲ್ಲಿ ನಟಿಸಿದ್ದ ಅಭಿನಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ಅಭಿನಯಗೆ ಮಾತು ಬರಲ್ಲ, ಕಿವಿನೂ ಕೇಳಲ್ಲ. ಆದರೆ ನಟನೆಯಲ್ಲಿ ಮಾತ್ರ ಅದ್ಭುತ ಪ್ರತಿಭೆ. ಕನ್ನಡ, ತಮಿಳು, ತೆಲುಗು, ಮಲಯಾಳಂನ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿ ಖ್ಯಾತಿ ಪಡೆದಿದ್ದಾರೆ.

ಇತ್ತೀಚೆಗೆ ವಿಶೇಷ ಚೇತನ ನಟಿ ಅಭಿನಯ ಅವರು ಬಹುಕಾಲದ ಗೆಳೆಯ ವೇಗೇಶನಾ ಕಾರ್ತಿಕ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ವೇಗೇಶನಾ ಕಾರ್ತಿಕ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದ ಸ್ನೇಹಿತನ ನಿಶ್ಚಿತಾರ್ಥದ ಫೋಟೋಗಳನ್ನ ಅಭಿನಯ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.ನನ್ನ ಬಾಳ ಸಂಗಾತಿ ನನಗೆ 15 ವರ್ಷದಿಂದ ಪರಿಚಯ ಇದೆ. ಅವರೇ ನನಗೆ ವೇಗೇಶನಾ ಕಾರ್ತಿಕ್ ಎಂದು ಅಭಿನಯ ಎಲ್ಲರಿಗೂ ಪರಿಚಯ ಮಾಡಿದ್ದರು.

ಅಭಿನಯ ಅವರು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಹುಡುಗರು ಸಿನಿಮಾದಲ್ಲಿ ತಂಗಿಯಾಗಿ ಬಣ್ಣ ಹಚ್ಚಿದ್ದರು. ಬಳಿಕ ಕಿಚ್ಚು, ಆಟೋ ರಾಮಣ್ಣ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!