ಹೊಸದಿಗಂತ ವರದಿ, ಮಂಡ್ಯ:
ಬ್ಯಾಡ್ ಮಾನರ್ಸ್’ ಚಿತ್ರ ವೀಕ್ಷಣೆಗೆ ಆಗಮಿಸಿದ ನಟ ಅಭಿಷೇಕ್ ಅಂಬರೀಷ್ ಅವರಿಗೆ ಭಾನುವಾರ ನಗರದಲ್ಲಿ ಅದ್ದೂರಿಯಾಗಿ ಅಭಿಮಾನಿಗಳು ಪುಷ್ಪಾರ್ಚನೆ ಮಾಡಿ, ಪಟಾಕಿ ಸಿಡಿಸುವ ಮೂಲಕ ಸ್ವಾಗತ ನೀಡಿದರು.
ಬ್ಯಾಡ್ ವ್ಯಾನರ್ಸ ಚಲನಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ, ಈ ಹಿನ್ನೆಲೆಯಲ್ಲಿ ನಗರದ ಸಂಜಯ ಚಿತ್ರಮಂದಿರಕ್ಕೆ ಬೇಟಿ ನೀಡಿದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರನ್ನು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು.
ನಟ ಅಭಿಷೇಕ್ ಅಂಬರೀಷ್ ಮಾತನಾಡಿ, ನಮ್ಮ ತಂದೆಯವರ ಅಭಿಮಾನಿಗಳು ನನ್ನನ್ನು ಬೆಳೆಸುತ್ತಿದ್ದೀರಾ, ನನ್ನ ಜೊತೆ ನೀವೆಲ್ಲಾ ಇದ್ದಿರಾ ಎನ್ನುವುದೇ ಒಂದು ಧೈರ್ಯವಾಗಿದೆ. ಈ ಸಂದರ್ಭದಲ್ಲಿ ತಂದೆ ಅಂಬರೀಷ್ ಅವರನ್ನು ನೆನೆದು ಅಭಿಷೇಕ್ ಅವರು ಭಾವುಕರಾದರು. ನಿಮ್ಮೆಲ್ಲರ ಪ್ರೀತಿ ಈಗೆ ಸದಾ ಇರಲಿ ಹಾಗೂ ಮಂಡ್ಯ ಜನರು ನನ್ನ ಚಿತ್ರ ವೀಕ್ಷಣೆ ಮಾಡಿ ಆಶೀರ್ವದಿಸ ಬೇಕೆಂದು ಮನವಿ ಮಾಡಿದರು.
ಪುಷ್ಪಾರ್ಚನೆ ಮಾಡಿ ಸ್ವಾಗತ: ಅಭಿಷೇಕ್ ಅಂಬರೀಷ್ ಅಗಮಿಸುತ್ತಿದ್ದಂತೆ ಸ್ಥಳದಲ್ಲಿದ್ದ ಅಭಿಮಾನಿಗಳು ಜೆಸಿಪಿಯಲ್ಲಿ ಪುಷ್ಪಾರ್ಚನೆ ಮಾಡಿದರು, ಸಂಜಯ ಥಿಯೇಟರ್ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮಹಿಳೆಯರು ಬೆಲ್ಲದ ಆರತಿ ಬೆಳಗುವ ಮೂಲಕ ದೃಷ್ಟಿ ತೆಗೆದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಘೋಷಣೆ ಕೂಗಿದರು.