ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಅಜಿತ್ ಕುಮಾರ್ ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿ ಚೆನ್ನೈಗೆ ಮರಳಿದ ವೇಳೆ ಗಾಯಗೊಂಡಿದ್ದಾರೆ. ಪರಿಣಾಮ ನಟ ಅಜಿತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಟ ಅಜಿತ್ ಕುಮಾರ್ ಪತ್ನಿ ಜೊತೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಪದ್ಮ ಭೂಷಣ ಪ್ರಶಸ್ತಿ ವಿಜೇತ ಅಜಿತ್ ನೋಡಲು ಅಭಿನಂದನೆ ಸಲ್ಲಿಸಲು ಕಿಕ್ಕಿರಿದು ಅಭಿಮಾನಿಗಳು ಸೇರಿದ್ದರು. ನಟ ಅಜಿತ್ ಹೊರಬರುತ್ತಿದ್ದಂತೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ.
ಇದರಿಂದ ಅಜಿತ್ ಕಾಲಿಗೆ ಗಾಯವಾಗಿದೆ. ಕಾರ್ ರೇಸ್ ವೇಳೆ ಗಾಯಗೊಂಡಿದ್ದ ಕಾಲಿಗೆ ಮತ್ತೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಜಿತ್ಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ.