ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಾಲಿವುಡ್ ನಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವವರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಇಂದಲ್ಲ, ಸತತ ಐದು ವರ್ಷಗಳಿಂದ ಅಲ್ಕಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿಸುವ ಬಾಲಿವುಡ್ ನಟರಲ್ಲಿ ಒಬ್ಬರಾಗಿದ್ದಾರೆ.
ಇದನ್ನು ಗುರುತಿಸಿ ಆದಾಯ ತೆರಿಗೆ ಇಲಾಖೆ ಅವರಿಗೆ ಈ ವರ್ಷವೂ ‘ಸನ್ಮಾನ ಪತ್ರ’ ನೀಡಿ ಗೌರವಿಸಿದೆ. ತಮ್ಮ ವಿಭಿನ್ನ ಕಥಾ ಹಂದರದ ಚಿತ್ರಗಳಿಂದ ಉತ್ತಮ ಸಂದೇಶ ನೀಡುವ ಈ ನಟ, ತೆರಿಗೆ ಪಾವತಿಯಲ್ಲೂ ಉತ್ತಮರೆನಿಸಿಕೊಂಡಿದ್ದಾರೆ.
ಅಕ್ಷಯ್ಗೆ ನೀಡಿರುವ ಸಮ್ಮಾನ್ ಪ್ರತ್ರದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ ಅಕ್ಷಯ್ ಪಾವತಿಸಿದ ತೆರಿಗೆ ಬರೋಬ್ಬರಿ 29.5 ಕೋಟಿ ರೂ.!