ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಭಾರತದ ಪೌರತ್ವ ಪಡೆದ ಖಷಿಯಲ್ಲಿದ್ದಾರೆ. ಈ ಮೂಲಕ ಅವರು ಈಗ ಭಾರತೀಯ ಪ್ರಜೆಯಾಗಿದ್ದಾರೆ.
ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ತಮ್ಮ ಅಧಿಕೃತ ಸರ್ಕಾರಿ ದಾಖಲೆಗಳ ಚಿತ್ರದೊಂದಿಗೆ ʼಮನಸ್ಸು ಮತ್ತು ಪೌರತ್ವ ಎರಡು ಹಿಂದೂಸ್ತಾನಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್ʼ ಎಂದು ಟ್ವೀಟ್ ಮಾಡಿದ್ದಾರೆ.
ನಟ ಅಕ್ಷಯ್ ಕುಮಾರ್‌ಗೆ ಕೆನಡಾದ ಪೌರತ್ವ ಇತ್ತು. ಈ ವಿಚಾರವಾಗಿ ಅವರು ಸಾಕಷ್ಟು ಟೀಕೆಗಳನ್ನು ಕೂಡ ಎದುರಿಸಿದ್ದರು.
Dil aur citizenship, dono Hindustani.
Happy Independence Day!
Jai Hind! 🇮🇳 pic.twitter.com/DLH0DtbGxk— Akshay Kumar (@akshaykumar) August 15, 2023