ಹೊಸದಿಗಂತ ಡಿಜಿಟಲ್ ಡೆಸ್ಕ್
ಜೈಲಿಂದ ರಿಲೀಸ್ ಆಗಿ ಬಂದಿರೋ ನಟ ಅಲ್ಲು ಅರ್ಜುನ್ ಮನೆಗೆ ಇಂದು ಟಾಲಿವುಡ್ ಗಣ್ಯರ ದಂಡೇ ಹರಿದು ಬರುತ್ತಿದ್ದು, ಇತ್ತ ಸ್ಯಾಂಡಲ್ ವುಡ್ ನಟ ಉಪೇಂದ್ರ ಕೂಡ ಭೇಟಿ ಮಾಡಿ ಮಾತಾಡಿದ್ದಾರೆ.
ಇದರ ನಡುವೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೂಡ ನಟ ಅಲ್ಲು ಅರ್ಜುನ್‌ಗೆ ಫೋನ್ ಮಾಡಿ ಬಂಧನದ ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಂಧ್ಯಾ ಥಿಯೇಟರ್ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ಅಲ್ಲು ಅರ್ಜುನ್‌ಗೆ ಸಿಎಂ ಚಂದ್ರಬಾಬು ನಾಯ್ಡು ಫೋನ್ ಮಾಡಿ ಮಾತಾಡಿದ್ದಾರೆ ಎನ್ನಲಾಗ್ತಿದೆ. ಅರ್ಜುನ್ ಅರ್ಜುನ್‌ಗೆ ಧೈರ್ಯವಾಗಿರಿ ಎಂದು ಸಲಹೆ ಕೂಡ ನೀಡಿದ್ದಾರೆ.
ನಿನ್ನೆ ಕೂಡ ಸಿಎಂ ಚಂದ್ರಬಾಬು ನಾಯ್ಡು ಕೂಡ ಅಲ್ಲು ಅರವಿಂದ್ ಅವರಿಗೆ ಕರೆ ಮಾಡಿ ಧೈರ್ಯವಾಗಿರಿ ಎಂದು ಸಲಹೆ ನೀಡಿದ್ದಾರೆ. ನಾಯಕ ಬಾಲಕೃಷ್ಣ, ಎನ್‌ಟಿಆರ್ ಮತ್ತು ಪ್ರಭಾಸ್ ಕೂಡ ಅಲ್ಲು ಅರ್ಜುನ್‌ಗೆ ಫೋನ್ ಮಾಡಿ ಮಾತಾಡಿದ್ದು, ಬಂಧನದ ಬಗ್ಗೆ ವಿಚಾರಿಸಿದ್ದಾರೆ.
ಪುಷ್ಪ-2 ಸಿನಿಮಾ ಪ್ರೀಮಿಯರ್ ನೋಡಲು ಬಂದಿದ್ದ ರೇವತಿ ಎನ್ನುವ ಮಹಿಳೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು.. ಈ ಕೇಸ್ಗೆ ಸಂಬಂಧಿಸಿದಂತೆ ಡಿ.13ರಂದು ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಂಧಿಸಿದ ದಿನವೇ ನಟ ಅಲ್ಲು ಅರ್ಜುನ್‌ಗೆ ಬೇಲ್ ಕೂಡ ಸಿಕ್ಕಿದೆ. ಶನಿವಾರ (ಡಿ.14) ಬೆಳಗ್ಗೆ ರಿಲೀಸ್ ಮಾಡಲಾಯಿತು.