ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಲು ಅರ್ಜುನ್ ಅವರಿಗೆ ಕಷ್ಟದ ಸಮಯ ಎದುರಾಗಿದೆ. ಅವರ ಮನೆಯ ಮೇಲೆ ದಾಳಿ ನಡೆದಿದೆ. ಹೈದರಾಬಾದ್ನಲ್ಲಿರುವ ನಿವಾಸದ ಹೊರ ಭಾಗವನ್ನು ಹಾಳು ಮಾಡಲಾಗಿದೆ. ಮನೆ ಸೇಫ್ ಅಲ್ಲ ಎನ್ನುವ ಕಾರಣಕ್ಕೆ ಮಕ್ಕಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.
ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟಿದ್ದರು. ಇದಕ್ಕೆ ಅಲ್ಲು ಅರ್ಜುನ್ ಪರೋಕ್ಷ ಕಾರಣ ಎನ್ನಲಾಗಿದೆ. ಅವರಿಗೆ ನ್ಯಾಯ ಸಿಗಬೇಕು ಎಂದು ಅಲ್ಲು ಅರ್ಜುನ್ ಮನೆ ಎದುರು ಪ್ರತಿಭಟನೆ ನಡೆಸಲಾಗುತ್ತಿತ್ತು. ಆ ಬಳಿಕ ಅವರು ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿ ಬಳಿಕ ಅಲ್ಲು ಅರ್ಜುನ್ ಮಕ್ಕಳು ಮನೆ ಬಿಟ್ಟು ಹೊರಟಿದ್ದಾರೆ.
‘ಇಸ್ಮಾನಿಯಾ ಯೂನಿವರ್ಸಿಟಿ ಜಾಯಿಂಟ್ ಆ್ಯಕ್ಷನ್ ಕಮಿಟಿಯವರು ಈ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಈ ದಾಳಿ ಬಳಿಕ ಅಲ್ಲು ಅರ್ಜುನ್ ಭಯಗೊಂಡಿದ್ದಾರೆ. ಅಲ್ಲು ಅರ್ಜುನ್ ಮಕ್ಕಳಾದ ಅಲ್ಲು ಅರ್ಹಾ, ಅಲ್ಲು ಅಯಾನ್ ಕಾರು ಹತ್ತಿ ವೇಗವಾಗಿ ಹೊರಟಿದ್ದಾರೆ. ಅವರು ಬೇರೆ ಕಡೆ ಹೋಗಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.
ಎಲ್ಲ ಹೀರೋಗಳು ಫಸ್ಟ್ ಡೇ ಫಸ್ಟ್ ಶೋಗೆ ಆಗಮಿಸಿ ತಮ್ಮ ಸಿನಿಮಾ ಗೆಲುವಿನ ಖುಷಿಯನ್ನು ಕಾಣೋದು ಮಾಮೂಲಿ. ಆ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಆಗಿದ್ದ ಘಟನೆ ನೋವಾಗಿದೆ. ಆದರೆ ಅಲ್ಲು ಅರ್ಜುನ್‌ಗೆ ತಮ್ಮ ಮನೆಯೇ ಸೇಫ್ ಅಲ್ಲ ಎಂದು ಫೀಲ್ ಮಾಡಿಸುತ್ತಿರೋದು ತಪ್ಪು ಎಂದು ಫ್ಯಾನ್ಸ್ ಬೇಸರಿಸಿಕೊಂಡಿದ್ದಾರೆ.