ಹೊಸದಿಗಂತ ಡಿಜಿಟಲ್ ಡೆಸ್ಕ್:
76ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹಿರಿಯ ನಟ ಅನಂತ್ ನಾಗ್ ಅವರಿಗೆ ಕೇಂದ್ರ ಸರ್ಕಾರ 2025ನೇ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ಪದ್ಮಭೂಷಣ ಘೋಷಿಸಿದೆ.
ಇತ್ತ ಎಲ್ಲಡೆ ಅವರಿಗೆ ಅಭಿನಂದನೆಗಳು ಹರಿದು ಬರುತ್ತಿದೆ. ಇದೀಗ ಈ ಸಾಲಿಗೆ ನಟ ಕಿಚ್ಚ ಸುದೀಪ್ ಅರು ಕೂಡ ಸೇರಿದ್ದು, ಬಿಗ್ ಬಾಸ್ ವೇದಿಕೆ ಮೇಲೆ ಅನಂತ್ ನಾಗ್ ಅವರನ್ನು ನೆನಪಿಸಿಕೊಂಡರು.
ಅವರಿಗೆ ಅವಾರ್ಡ್ ಸಿಕ್ಕಿದ್ದಕ್ಕೆ ತುಂಬಾನೇ ಖುಷಿ ಇದೆ ಎಂದು ಸುದೀಪ್ ಅವರು ಹೇಳಿದ್ದಾರೆ. ಲೇಟ್ ಆಗಿ ಬಂದರೂ ಲೇಟೆಸ್ಟ್ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅನಂತ್ ನಾಗ್ ಅವರಿಗೆ ಪದ್ಮಭೂಷಣ ಸಿಗಬೇಕು ಎಂಬುದು ಈ ಮೊದಲಿನಿಂದಲೂ ಬರುತ್ತಿದ್ದ ಕೋರಿಕೆಗಳಲ್ಲಿ ಒಂದಾಗಿತ್ತು. ಇದಕ್ಕೆ ಈ ಮೊದಲು ಸುದೀಪ್ ಕೂಡ ಧ್ವನಿ ಗೂಡಿಸಿದ್ದರು. ಕೊನೆಗೂ ಕೋರಿಕೆ ಈಡೇರಿದೆ ಎಂದು ಸುದೀಪ್ ಹೇಳಿದ್ದಾರೆ.
‘ಅನಂತ್ ನಾಗ್ ಅವರಿಗೆ ಪದ್ಮಭೂಷಣ ಬಂದಿದೆ. ಇದು ಹಲವು ವರ್ಷಗಳ ಕೋರಿಕೆ ಆಗಿತ್ತು. ಈ ಕೋರಿಕೆ ಈಡೇರಿದೆ. ಬಹಳ ಲೇಟ್ ಆಗಿ ಬಂದಿದೆ. ಲೇಟ್ ಆಗ್ ಬಂದ್ರೂ ಲೇಟೆಸ್ಟ್ ಆಗಿದೆ’ ಎಂದು ಸುದೀಪ್ ಅವರು ಬಿಗ್ ಬಾಸ್ ವೇದಿಕೆ ಮೇಲೆ ಅನಂತ್ ನಾಗ್ ಅವರಿಗೆ ಅಭಿನಂದನೆ ತಿಳಿಸಿದರು.
‘ಅನಂತ್ ನಾಗ್ ಅವರಿಗೆ ಪದ್ಮಭೂಷಣ ಸಿಕ್ಕಿದ್ದು, ನನಗೆ ಸಿಕ್ಕಷ್ಟು ಖುಷಿ ಇದೆ. ವೈಯಕ್ತಿಕವಾಗಿ, ಬಿಗ್ ಬಾಸ್ ತಂಡದ ಕಡೆಯಿಂದ, ಕನ್ನಡದ ಜನತೆಯಿಂದ ನಿಮಗೆ ಅಭಿನಂದನೆಗಳು. ಕನ್ನಡ ಚಿತ್ರರಂಗಕ್ಕೆ ನೀವು ಕೊಟ್ಟ ಕೊಡುಗೆಗೆ ಧನ್ಯವಾದಗಳು. ಲವ್ ಯೂ’ ಎಂದು ಸುದೀಪ್ ಅವರು ಹೇಳಿದ್ದಾರೆ.