CINE | ಡ್ಯಾನ್ಸ್‌ ಮಾಡಿಸಿಕೊಂಡು ಹಣ ಕೊಟ್ಟಿಲ್ಲ, ನಟ, ಗಾಯಕ ದಿಲ್ಜೀತ್‌ ವಿರುದ್ಧ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ನಟ, ಪಂಜಾಬಿ ಸಿಂಗರ್‌ ದಿಲ್ಜೀತ್‌ ದೋಸ್ಸಾಂಜ್‌ ವಿರುದ್ಧ ಗಂಭೀರ ಆರೋಪ ಎದುರಾಗಿದೆ.

ದಿಲ್ಲುಮಿನಾಟಿ’ ಹೆಸರಿನ ಟೂರ್ ಅನ್ನು ದಿಲ್ಜೀತ್ ದೊಸ್ಸಾಂಜ್ ಆಯೋಜಿಸಿದ್ದರು. ತಂಡವನ್ನು ಕಟ್ಟಿಕೊಂಡು ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ದಿಲ್ಜೀತ್ ಲೈವ್ ಪ್ರದರ್ಶನ ನೀಡಿದರು.

ದಿಲ್ಜೀತ್​ರ ಕಾನ್ಸರ್ಟ್​ಗಳಿಗೆ ದಾಖಲೆ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದರು. ಹಲವು ಪ್ರತಿಷ್ಠಿತ ಆಡಿಟೋರಿಯಮ್​ಗಳಲ್ಲಿ ದಿಲ್ಜೀತ್ ಹಾಡಿದ್ದರು. ಈ ಟೂರ್​ಗೆ ಆಯ ದೇಶದ ಭಾರತೀಯ ಮೂಲದ ಡ್ಯಾನ್ಸರ್​ಗಳನ್ನು ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಇವರ್ಯಾರಿಗೂ ಹಣ ಕೊಟ್ಟಿಲ್ಲ ಎಂದು ದಿಲ್ಜೀತ್ ಮೇಲೆ ಆರೋಪ ಕೇಳಿ ಬಂದಿದೆ. ಫ್ರೀಯಾಗಿ ಕೆಲಸ ಮಾಡಲಿ ಎಂದು ದಿಲ್ಜೀತ್‌ ಅಪೇಕ್ಷೆ ಪಟ್ಟಿದ್ದರು ಎಂದು ಟೀಂ ಹೇಳಿದೆ.

ಲಾಸ್ ಏಂಜಲ್ಸ್​ನಲ್ಲಿ ನೆಲೆಸಿರುವ ಭಾರತೀಯ ಮೂಲದ ರಜತ್ ರಾಕಿ ಭಟ್ಟ, ದಿಲ್ಜೀತ್ ದೊಸ್ಸಾಂಜ್ ವಿರುದ್ಧ ಆರೋಪ ಮಾಡಿದ್ದಾರೆ. ದೇಸಿ ಕಲಾವಿದರನ್ನು ತಮ್ಮ ಲೈವ್ ಕಾನ್ಸರ್ಟ್​ಗೆ ಬಳಸಿಕೊಂಡಿದ್ದರು. ಆದರೆ ಅವರಿಗೆ ಹಣ ನೀಡಲಾಗಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!