ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ನಟ ಅರ್ಜುನ್ ಸರ್ಜಾ (Arjun Sarja) ಅವರ ಪುತ್ರಿ ಐಶ್ವರ್ಯ ಸರ್ಜಾ ಅವರ ಮದುವೆ (Marriage) ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದ್ದು,ಇದೀಗ ಈ ಕುರಿತು ತಮ್ಮ ಮಗನ ಜೊತೆ ಐಶ್ವರ್ಯರ ಮದುವೆ ಆಗುತ್ತಿರುವುದು ನಿಜ ಎಂದು ಹುಡುಗನ ತಂದೆಯೇ ಅಧಿಕೃತ ಹೇಳಿಕೆ ನೀಡಿದ್ದಾರೆ.
ತಮ್ಮ ಪುತ್ರಿಯನ್ನು ತಮಿಳಿನ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ (Thambi Ramaiah) ಅವರ ಪುತ್ರ ಉಮಾಪತಿ ರಾಮಯ್ಯ (Umapati Ramaiah) ಜೊತೆ ಮದುವೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಮಾಧ್ಯಮಗಳು ಸುದ್ದಿ ಮಾಡಿದ್ದವು. ಇದೀಗ ಎಲ್ಲವೂ ನಿಜ ಎಂದು ತಂಬಿ ರಾಮಯ್ಯ ತಿಳಿಸಿದ್ದಾರೆ.
ನನ್ನ ಮಗನ ಜೊತೆ ಐಶ್ವರ್ಯ ಅವರ ಮದುವೆ ಆಗುತ್ತಿರುವುದು ನಿಜ. ಇಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟಿದ್ದಾರೆ. ಒಪ್ಪಿಕೊಂಡಿದ್ದಾರೆ. ಮದುವೆ ದಿನಾಂಕವನ್ನು ಗೊತ್ತು ಪಡಿಸಬೇಕಿದೆ. ಜನವರಿಯಲ್ಲಿ ಮದುವೆ ಮಾಡಲು ನಿಶ್ಚಿಯ ಮಾಡಲಾಗಿದೆ ಎಂದು ತಂಬಿ ರಾಮಯ್ಯ ತಿಳಿಸಿದ್ದಾರೆ.
ತಂಬಿ ರಾಮಯ್ಯ ತಮಿಳಿನ ಸುಪ್ರಸಿದ್ದ ಹಾಸ್ಯ ನಟರು. ರಾಷ್ಟ್ರ ಪ್ರಶಸ್ತಿ ವಿಜೇತರು ನಟರು. ಇವರ ಪುತ್ರ ಉಮಾಪತಿ ರಾಮಯ್ಯ ಕೂಡ ನಟರಾಗಿ 2017ರಲ್ಲೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಆದರೆ, ಅವರಿಗೂ ಇನ್ನೂ ಬ್ರೇಕ್ ಎನ್ನುವಂತಹ ಸಿನಿಮಾ ಬಂದಿಲ್ಲ. ದೇವದಾಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಉಮಾಪತಿ ನಟಿಸಿದ್ದಾರೆ.