Saturday, December 13, 2025

CINE | ನಟ ಬಾಲಕೃಷ್ಣ ಸಿನಿಮಾ ಪೋಸ್ಟರ್‌ಗೆ ಬಿಯರ್ ಅಭಿಷೇಕ, ಇದೆಂಥ ವಿಚಿತ್ರ ಅಭಿಮಾನ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಯಚೂರು ನಗರದ ಚಿತ್ರಮಂದಿರದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ ಸಿನಿಮಾ ಪೋಸ್ಟರ್‌ಗೆ ಅಭಿಮಾನಿಯೊಬ್ಬ ಬಿಯರ್ ಅಭಿಷೇಕ ಮಾಡಿ ವಿಚಿತ್ರ ಅಭಿಮಾನ ಮೆರೆದಿದ್ದಾರೆ.

ಕಂಠಪೂರ್ತಿ ಕುಡಿದು ಬಾಟಲ್ ಹಿಡಿದುಕೊಂಡೆ ಅಖಂಡ-2 ಸಿನಿಮಾಗೆ ಬಂದಿದ್ದ ಅಭಿಮಾನಿ ತೂರಾಡುತ್ತಲೇ ಬಿಯರ್ ಅಭಿಷೇಕ ಮಾಡಿದ್ದಾರೆ.

ಶುಕ್ರವಾರ (ಡಿ.12) ಅಖಂಡ-2 ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ನೋಡಲು ಅಭಿಮಾನಿಯೊಬ್ಬರು ಕಂಠಪೂರ್ತಿ ಕುಡಿದು ಬಾಟಲ್ ಹಿಡಿದುಕೊಂಡೆ ರಾಯಚೂರು ನಗರದ ಪೂರ್ಣಿಮಾ ಚಿತ್ರಮಂದಿರಕ್ಕೆ ಬಂದಿದ್ದರು. ಈ ವೇಳೆ ಸಿನಿಮಾ ನೋಡೋಕು ಮುನ್ನ ಅಖಂಡ-2 ಸಿನಿಮಾ ಪೋಸ್ಟರ್‌ಗೆ ಬಿಯರ್ ಸುರಿದು ಅಭಿಷೇಕ ಮಾಡಿ, ವಿಚಿತ್ರ ಅಭಿಮಾನ ತೋರಿಸಿದ್ದಾರೆ. ಜೊತೆಗೆ ನಟ ಬಾಲಯ್ಯಗೆ ಜೈಕಾರ ಹಾಕಿದ್ದಾರೆ.ಸದ್ಯ ಬಿಯರ್ ಅಭಿಷೇಕದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

error: Content is protected !!