ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುರುಷರು ತುಳಸಿಗೆ ನೀರು ಹಾಕುವುದು ವಿರಳ. ಆದರೆ ದರ್ಶನ್ ಇಂದು ಮನೆಯ ಮುಂದಿರುವ ತುಳಸಿ ಗಿಡಕ್ಕೆ ನೀರೆರೆದು ಕೈಮುಗಿದಿದ್ದಾರೆ.
ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ದರ್ಶನ್ ಮನೆಯಿಂದ ಹೊರಡುವ ಮೊದಲು ನೀರು ತುಂಬಿದ ಲೋಟ ಹಿಡಿದು ಮುಖ್ಯ ದ್ವಾರದಿಂದ ಹೊರಬಂದು ತುಳಸಿಗಿಡಕ್ಕೆ ನೀರು ಹಾಕಿದ್ದಾರೆ. ಮನೆಯ ಒಳಗೆ ಹೋಗಿ ಸ್ವಲ್ಪ ಸಮಯದ ಬಳಿಕ ಹೊರಬಂದು ಅಭಿಮಾನಿಗಳನ್ನ ಭೇಟಿಯಾಗಿ ಕೋರ್ಟ್‌ನತ್ತ ಸಾಗಿದ್ದಾರೆ.
ಪ್ರತಿನಿತ್ಯ ಕೆಲವರು ಬೆಳಗ್ಗೆ ತುಳಸಿಗೆ ನೀರು ಹಾಕುವ ಪದ್ದತಿಯನ್ನು ಪಾಲಿಸಿಕೊಂಡು ಬರುತ್ತಾರೆ. ಅದರಂತೆ ದರ್ಶನ್ ಕೂಡ ನೀರು ಹಾಕಿ ಕೈ ಮುಗಿಯುತ್ತಾರೆ ಎನ್ನಲಾಗುತ್ತೆ.