ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್ ಇಂದು ಮೈಸೂರಿಗೆ ತೆರಳಲಿದ್ದಾರೆ.
ದರ್ಶನ್‌ರನ್ನು ಮೈಸೂರಿಗೆ ಕರೆದುಕೊಂಡು ಹೋಗಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಯಾಕೆಂದರೆ ದರ್ಶನ್ ರೇಣುಕಾಸ್ವಾಮಿ ಮರ್ಡರ್ ನಂತರ ಮೈಸೂರಿಗೆ ತೆರಳಿದ್ದರು. ಅಲ್ಲಿನ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು. ಹಾಗೇ ನಾಲ್ವರನ್ನು ಸರೆಂಡರ್ ಆಗೋಕೆ ಮನವೊಲಿಸಲು ಅದೇ ಹೊಟೇಲ್‌ಗೆ ಕರೆಸಿದ್ದರು ಎನ್ನಲಾಗಿದೆ.
ಆರೋಪಿ ದರ್ಶನ್ ಜೊತೆ ಪವನ್, ನಾಗರಾಜ್, ನಂದೀಶ್, ಲಕ್ಷ್ಮಣ್, ದೀಪಕ್ನನ್ನು ಮೈಸೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ದರ್ಶನ್ ಉಳಿದುಕೊಂಡಿದ್ದ ಖಾಸಗಿ ಹೋಟೆಲ್ ಸೇರಿದಂತೆ ಹಲವೆಡೆ ಸ್ಥಳ ಮಹಜರು ಮಾಡೋ ಸಾಧ್ಯತೆ ಇದೆ. ವಿಚಾರಣೆ ದೃಷ್ಟಿಯಲ್ಲಿ ಇದು ತುಂಬಾನೇ ಮುಖ್ಯ ಆಗಲಿದೆ. ದರ್ಶನ್ ಮೈಸೂರಿನಲ್ಲಿ ಏನು ಮಾಡಿದರು, ಕೊಲೆಗೆ ಸಂಬಂಧಿಸಿ ಅವರು ಹೋಟೆಲ್ನಲ್ಲಿ ಚರ್ಚೆ ಮಾಡಿದ್ದರೇ ಎನ್ನುವ ಕುರಿತು ತನಿಖೆ ನಡೆಯಲಿದೆ.