ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಜೈಲುವಾಸ ಅನುಭವಿಸ್ತಿದ್ದಾರೆ. ಜೈಲೂಟ ತಿಂದು ದರ್ಶನ್ ತೂಕ ದಿನೇ ದಿನೇ ಇಳಿಯುತ್ತಿದ್ದು, ಮನೆ ಊಟ ಬೇಕು ಎಂದು ನಟ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಟನಾದ ದರ್ಶನ್ ತಮ್ಮ ಬಾಡಿಯ ಬಗ್ಗೆ ನ್ಯಾಚುರಲ್ ಆಗಿ ಕಾನ್ಶಿಯಸ್ ಆಗಿದ್ದಾರೆ. ಇದರ ಜತೆಗೆ ಪ್ರತಿದಿನ ನಾನ್ವೆಜ್ ಹಾಗೂ ಪ್ರೋಟೀನ್ ಮೀಲ್ಸ್ ತಿನ್ನುವವರಿಗೆ ಜೈಲಿನ ಮುದ್ದೆ, ಚಪಾತಿ ಹಿಡಿಸುತ್ತಿಲ್ಲ. ದರ್ಶನ್ ಪರ ವಕೀಲರು ಜೈಲೂಟ ಬೇಡ. ನಮ್ಮ ಕಕ್ಷಿದಾರರಿಗೆ ಮನೆ ಊಟಕ್ಕೆ ಅನುಮತಿ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ದರ್ಶನ್ ಪರ ವಕೀಲರು ಊಟ, ಹಾಸಿಗೆ, ಪುಸ್ತಕವನ್ನು ಮನೆಯಿಂದ ಪಡೆಯಲು ಅನುಮತಿ ಕೋರಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ದರ್ಶನ್ ಪರ ವಕೀಲರಿಂದ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.