Saturday, November 1, 2025

ವಧು ವರರ ಗೆಟಪ್‌ನಲ್ಲಿ ನಟ ದರ್ಶನ್‌-ಪವಿತ್ರಾ ಗೌಡ! ಫೋಟೊಸ್‌ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊಲೆ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾರದ್ದು ಎನ್ನಲಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಇವುಗಳನ್ನು ಪ್ರಾಥಮಿಕವಾಗಿ ಲೀಕ್ ಮಾಡಿದ ಫೋಟೋಗಳು ಎನ್ನಲಾಗುತ್ತಿದ್ದು, ದರ್ಶನ್ ಹಾಗೂ ಪವಿತ್ರಾ ಗೌಡ ಮದುವೆಯದ್ದು ಅನ್ನೋದನ್ನ ಬಿಂಬಿಸಲು ಲೀಕ್ ಮಾಡಿರುವ ಫೋಟೋಗಳಂತೆ ಕಾಣುತ್ತಿದೆ.

ಪವಿತ್ರಾ ಹಾಗೂ ದರ್ಶನ್ ಬಿಳಿಯ ರೇಷ್ಮೆ ವಸ್ತ್ರದಲ್ಲಿ ವಧು-ವರರ ಅವತಾರದಲ್ಲಿದ್ದಾರೆ. ಪವಿತ್ರಾ ಕತ್ತಲ್ಲಿ ಅರಿಶಿಣ ದಾರದ ಮಾಂಗಲ್ಯ ಕಾಣುತ್ತದೆ. ಕೆನ್ನೆಗೆ ಅರಿಶಿಣ ಹಚ್ಚಿದ್ದಾರೆ, ಹಣೆಗೆ ಕುಂಕುಮವಿಟ್ಟಿದ್ದಾರೆ.

ದರ್ಶನ್ ಕೂಡ ಹಣೆಗೆ ತಿಲಕವಿಟ್ಟು ಪವಿತ್ರಾ ಜೊತೆ ಅನ್ಯೋನ್ಯವಾಗಿ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. 10 ವರ್ಷಗಳ ಹಿಂದಿನ ಫೋಟೋಗಳು ಎನ್ನುವಂತೆ ಕಾಣುತ್ತಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಪ್ರಕರಣದ ಸಂಬಂಧ ಟ್ರಯಲ್ ಶುರುವಾಗುತ್ತಿರುವ ಈ ಹೊತ್ತಲ್ಲಿ ಸೋಶಿಯಲ್ ಮದುವೆಯದ್ದು ಎನ್ನಲಾದ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಲಾಗಿದೆ. ಇವು ಎಐ ಫೋಟೋಗಳು ಎಂದೂ ಚರ್ಚೆಗಳು ಶುರುವಾಗಿದೆ. ತನಿಖೆಯ ಬಳಿಕವೇ ಸತ್ಯಾಸತ್ಯತೆ ಬಯಲಾಗಬೇಕಿದೆ.

error: Content is protected !!