May 8, 2026
Friday, May 8, 2026
spot_img

VIRAL | ʼಅಯ್ಯೋ ಸರ್ಕೊಳಮ್ಮ ನಾನ್‌ ರೊಟ್ಟಿ ಮಾಡ್ತೀನಿʼ ಮಾವ-ಸೊಸೆ ಅಂದ್ರೆ ಹೀಗಿರ್ಬೇಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೈ ಮುರಿದುಕೊಂಡ ಸೊಸೆಗೆ ಮಾವನೇ ರೊಟ್ಟಿ ತಟ್ಟಿಕೊಟ್ಟಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಈ ವಿಡಿಯೋದಲ್ಲಿ ಸೊಸೆ ಕೈ ಮುರಿದುಕೊಂಡು ಬ್ಯಾಂಡೇಜ್‌ ಹಾಕಿರುವುದು ಕಾಣುತ್ತದೆ. ಒಂದೇ ಕೈಯಲ್ಲಿ ರೊಟ್ಟಿ ತಟ್ಟುವಾಗ ಮಾವ ಅಡುಗೆ ಮನೆಗೆ ಬಂದು ಸಹಾಯ ಮಾಡುತ್ತಾರೆ.

ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಮಾವ ಸೊಸೆ ಅಂದ್ರೆ ಹೀಗೆ ಇರಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮಾವನಿಗೆ ವಯಸ್ಸಾಗಿದ್ದರೂ ಸೊಸೆಗೆ ಸಮಸ್ಯೆಯಾಗುತ್ತದೆ ಎಂದು ಅಡುಗೆ ಮಾಡಿದ್ದಾರೆ.

ಮಾವ ರೊಟ್ಟಿ ಮಾಡಿಕೊಟ್ಟರೆ ಮತ್ತೊಂದೆಡೆ ಸೊಸೆ ಅದನ್ನು ಕಾವಲಿ ಮೇಲೆ ಬೇಯಿಸುತ್ತಿದ್ದಾರೆ. ಮಾವನಿಗೆ ನಿಲ್ಲಲಾಗದಷ್ಟು ವಯಸ್ಸಾಗಿದ್ದರೂ ಕೂಡ ಸೊಸೆ ಮೇಲಿನ ಕಾಳಜಿಯಿಂದ ಊಟಕ್ಕೆ ಸಹಾಯ ಮಾಡಿದ್ದಾರೆ.

ವಿಡಿಯೋ ನೋಡಿದ ಹಲವರು ಅಷ್ಟು ವಯಸ್ಸಾದವರ ಕೈಯಲ್ಲಿ ಅಡುಗೆ ಯಾಕೆ ಮಾಡಿಸ್ಬೇಕು? ವಿಡಿಯೋ ಮಾಡಿರೋರೆ ಹೆಲ್ಪ್‌ ಮಾಡಬಹುದಿತ್ತು ಎಂದಿದ್ದಾರೆ. ಮಾವ ಸೊಸೆಯ ಕ್ಯೂಟ್‌ ವಿಡಿಯೋ ಎನಿಸಿ ಮಗನೇ ಸೆರೆಹಿಡಿದಿರಬಹುದು ಎಂದು ನೆಟ್ಟಿಗರು ಹೇಳ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !