ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿಯಲ್ಲಿ ನಟ ದರ್ಶನ್‌ಗೆ ಜಾಮೀನು ಸಿಕ್ಕೆ ಸಿಗುತ್ತದೆ ಎಂದು ನಟ ಝೈದ್ ಖಾನ್ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ.
ನಟ ಝೈದ್ ಖಾನ್ ಅಭಿನಯದ ‘ಕಲ್ಟ್ʼ ಸಿನಿಮಾ ಜನವರಿ 23ರಂದು ತೆರೆಗೆ ಬರಲು ಸಜ್ಜಾಗಿದೆ. ಸದ್ಯ ಚಿತ್ರ ತಂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಈ ನಡುವೆ ಜನವರಿಯಲ್ಲಿ ನಟ ದರ್ಶನ್‌ಗೆ ಜಾಮೀನು ಸಿಕ್ಕೆ ಸಿಗುತ್ತದೆ. ಜನವರಿ 23ರೊಳಗೆ ಜಾಮೀನು ಸಿಗದಿದ್ದರೆ, ಜೈಲಿಗೆ ಹೋಗಿ ದರ್ಶನ ಅಣ್ಣನ ಆಶೀರ್ವಾದ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಟ ಝೈದ್ ಖಾನ್ ,ನೋವಿನಲ್ಲೂ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ಕೊಡುವುದು ಹೇಗೆ?, ಕಥೆ ಹೇಗಾದರೂ ಇರಲಿ, ದರ್ಶನ್ ಎಂಬ ಹೆಸರಿನಿಂದ ಸಿನಿಮಾ ಸಕ್ಸಸ್ ಆಗಿಯೇ ಆಗುತ್ತದೆ. ಇವೆರಡನ್ನು ನಾನು ಡೆವಿಲ್ ನೋಡಿ ಕಲಿತುಕೊಂಡೆ. ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಹೇಳಿದರು.
ಸಚಿವ ಜಮೀರ್ ಅಹ್ಮದ್ ಅವರ ಕಾಂಟ್ರವರ್ಸಿಗಳು ನಿಮ್ಮ ಸಿನಿಮಾಗೆ ಎಫೆಕ್ಟ್ ಆಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಖಂಡಿತ ಎಫೆಕ್ಟ್ ಆಗಿದೆ. ನನ್ನ ಹಿಂದಿನ ಸಿನಿಮಾ ಮೇಲೆ ಅವರ ರಾಜಕೀಯದ ಬೆಳವಣಿಗೆಯಿಂದ ಪರಿಣಾಮ ಉಂಟಾಗಿತ್ತು. ಅವರ ಕಾಂಟ್ರವರ್ಸಿಗಳಿಂದ ನನ್ನ ಸಿನಿಮಾ ಬಾಯ್ಕಾಟ್ ಮಾಡಿದ್ದರು. ಮನಸಲ್ಲಿ ಕೆಲವು ಮಾತುಗಳು ಇವೆ. ಅವುಗಳನ್ನು ಬಾಯಲ್ಲಿ ಈಗ ಹೇಳಲು ಆಗಲ್ಲ. ಚಿತ್ರ ಗೆದ್ದ ಮೇಲೆ ಹೇಳಿದರೆ ಅದಕ್ಕೆ ತೂಕ ಇರುತ್ತದೆ. ಹೀಗಾಗಿ ಗೆದ್ದಾದ ಬಳಿಕ ಎಲ್ಲಾ ಹೇಳುತ್ತೇನೆ ಎಂದರು.
ಪೈರಸಿ ಕಾಟ ತಡೆಯಲು ಕಾಯ್ದೆ ರೂಪಿಸಬೇಕಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಡಲಿ ಬಿಡಿ ಸಂತೋಷ. ಬೇಡ ಎಂದರೆ ಬಿಡ್ತಾರಾ?, ಅವರ ಕರ್ತವ್ಯ ಅವರು ಮಾಡಲಿ ಬಿಡಿ. ಆದರೆ ಅಪ್ಪಿತಪ್ಪಿ ಸಿಕ್ಕಿಹಾಕಿಕೊಂಡರೆ ನಾವು ಬಿಡಲ್ಲ. ಆದ್ದರಿಂದ ಹುಷಾರಾಗಿ ಇರಿ ಎಂದು ಪೈರಸಿ ಮಾಡೋರಿಗೆ ಎಚ್ಚರಿಕೆ ನೀಡಿದರು.

