ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಇತ್ತೀಚೆಗೆ ನ್ಯಾಯಾಲಯದ ಮೂಲಕ ಹಾಸಿಗೆ ಹಾಗೂ ದಿಂಬು ಒದಗಿಸಬೇಕೆಂದು ಮನವಿ ಸಲ್ಲಿಸಿದ್ದರೂ, ಜೈಲು ಅಧಿಕಾರಿಗಳು ಅದನ್ನು ತಿರಸ್ಕರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಜೈಲು ಮೂಲಗಳ ಪ್ರಕಾರ, ವಿಚಾರಣೆಯ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಮತ್ತು ಅಗತ್ಯ ಸೌಲಭ್ಯಗಳು ಸಿಗದಿರುವುದರಿಂದ ದರ್ಶನ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಸುಮಾರು 10 ಕಿಲೋ ತೂಕ ಇಳಿದಿರುವುದಾಗಿ ಮೂಲಗಳು ತಿಳಿಸಿವೆ. ದಿನದ ಹೆಚ್ಚಿನ ಸಮಯವನ್ನು ಅವರು ಒಂಟಿಯಾಗಿ ಕಳೆಯುತ್ತಿದ್ದು, ಯಾವುದೇ ವ್ಯಾಯಾಮ ಅಥವಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಸಹ ಆರೋಪಿಗಳಾದ ಅನು, ಜಗದೀಶ್, ಪ್ರದೋಶ್, ನಾಗರಾಜ್ ಹಾಗೂ ಲಕ್ಷ್ಮಣ್‌ರೊಂದಿಗೆ ಸಂವಹನವನ್ನೂ ಕಡಿಮೆ ಮಾಡಿದ್ದಾರೆ.
ದರ್ಶನ್ ಪ್ರಸ್ತುತ 20×30 ಅಳತೆಯ ಕ್ವಾರಂಟೈನ್ ಸೆಲ್‌ನಲ್ಲೇ ಇರಿಸಲಾಗಿದ್ದು, ಭದ್ರತಾ ಕಾರಣಗಳಿಂದ ಅವರನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿಲ್ಲ. ಈ ಸೆಲ್‌ನಲ್ಲಿ ಟಿವಿ ಇಲ್ಲದಿದ್ದರೂ, ಎರಡು ಸಿಸಿಟಿವಿ ಕ್ಯಾಮರಾಗಳು ಅಳವಡಿಸಲ್ಪಟ್ಟಿವೆ. ಬೆಳಿಗ್ಗೆ 6.30ಕ್ಕೆ ಜೈಲು ಸಿಬ್ಬಂದಿ ಸೆಲ್ ಪರಿಶೀಲನೆ ನಡೆಸುತ್ತಾರೆ.
ಜೈಲು ಭದ್ರತೆಯನ್ನು ಹೆಚ್ಚಿಸಲು ಪ್ರತಿ ಸಿಬ್ಬಂದಿಗೆ ಬಾಡಿ ಕ್ಯಾಮರಾ ನೀಡಲಾಗಿದೆ. ತಮ್ಮ ಶಿಫ್ಟ್ ಅವಧಿಯವರೆಗೆ ಅದು ನಿರಂತರವಾಗಿ ಆನ್‌ನಲ್ಲಿರಬೇಕು. ಪ್ರತಿದಿನದ ದೃಶ್ಯಾವಳಿಗಳನ್ನು ಸರ್ವರ್‌ಗೆ ಅಪ್‌ಲೋಡ್ ಮಾಡುವ ಪ್ರಕ್ರಿಯೆ ಕಡ್ಡಾಯವಾಗಿದೆ. ಯಾವುದೇ ಅಪರಿಚಿತ ಘಟನೆಗಳು ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

