October 12, 2026
Monday, October 12, 2026
spot_img

ಜೈಲಿನಲ್ಲಿ ನಟ ದರ್ಶನ್‌ಗೆ ಸೊಳ್ಳೆ ಕಾಟ ಹೆಚ್ಚಾಗಿದೆಯಂತೆ! ಏನಾದ್ರೂ ಮಾಡಿ ಎಂದು ಡಿಜಿಪಿಗೆ ಮನವಿ ಮಾಡಿದ್ದಕ್ಕೆ ಸಿಕ್ಕಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಸೊಳ್ಳೆ ಕಾಟ ಹೆಚ್ಚಾಗಿದೆಯಂತೆ! ಹೌದು, ಸೊಳ್ಳೆ ಕಾಟದಿಂದ ನೆಮ್ಮದಿ ಹಾಳಾಗಿದೆ ದಯವಿಟ್ಟು ಏನಾದರೂ ಮಾಡಿ ಎಂದು ನಟ ದರ್ಶನ್ ಅಲೋಕ್ ಕುಮಾರ್‌ ಅವರಿಗೆ ಮನವಿ ಮಾಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌ ಪತ್ತೆ ಹಿನ್ನೆಲೆ ಡಿಜಿಪಿ ಅಲೋಕ್‌ ಕುಮಾರ್‌ ದಿಢೀರ್‌ ಜೈಲಿಗೆ ಭೇಟಿ ನೀಡಿದ್ದರು. ಎಲ್ಲ ಬ್ಯಾರಕ್‌ಗಳನ್ನು ವಿಸಿಟ್‌ ಮಾಡಿದ್ದರು. ಈ ವೇಳೆ ಕ್ವಾರೆಂಟೈನ್‌ ಸೆಲ್‌ನಲ್ಲಿರುವ ನಟ ದರ್ಶನ್‌ನ್ನೂ ಭೇಟಿ ಮಾಡಿದ್ದರು.

ಸರ್‌ ತುಂಬಾ ಸೊಳ್ಳೆಗಳಿವೆ. ಸಂಜೆಯಾಗುತ್ತಿದ್ದಂತೆಯೇ ನೆಮ್ಮದಿ ಹಾಳುಮಾಡುತ್ತಿವೆ. ಇದಕ್ಕೆ ಏನಾದರೂ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸದ ಡಿಜಿಪಿ ಅಲೋಕ್‌ ಕುಮಾರ್‌, ಜೈಲಿನಲ್ಲಿ ಸೊಳ್ಳೆಗಳಿದ್ರೆ ಅದಕ್ಕೆ ಏನೂ ಮಾಡೋದಕ್ಕೆ ಆಗುವುದಿಲ್ಲ. ಜೈಲಿನ ಮ್ಯಾನುಯಲ್‌ನಲ್ಲಿ ಏನಿದೆಯೋ ಅದನ್ನು ಈಗಾಗಲೇ ಕೊಟ್ಟಿದ್ದೇವೆ. ಏನಿಲ್ಲವೋ ಅದನ್ನು ಕೇಳಬೇಡಿ ಕೊಡೋದಕ್ಕೆ ಆಗೋದಿಲ್ಲ ಎಂದಿದ್ದಾರೆ.

ಜೈಲಿನ ಮ್ಯಾನುಯಲ್‌ನಲ್ಲಿ ಇರೋದು ಏನಾದ್ರೂ ಇದ್ದರೆ ಈಗಲೇ ಹೇಳಿ ಸರಿ ಮಾಡೋಣ. ಆದರೆ ಸೊಳ್ಳೆಗಳ ಬಗ್ಗೆ ನಾವೇನೂ ಮಾಡೋಕೆ ಆಗೋದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

Must Read