ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟ ಧನುಷ್, ನಂಗೆ 40 ವರ್ಷ ವಯಸ್ಸಾಯ್ತು, ಇನ್ಮುಂದೆ ರೊಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ನಟ ಧನುಷ್ ನಟನೆಯ ‘ಮರಿಯಾನ್’ ಚಿತ್ರಕ್ಕೆ 10 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ, ಇತ್ತೀಚೆಗೆ ಧನುಷ್ ಮತ್ತು ಎ ಆರ್ ರೆಹಮಾನ್ ಇನ್ಸ್ಟಾಗ್ರಾಂ ನಲ್ಲಿ ಲೈವ್ ಬಂದಿದ್ದರು. ಈ ವೇಳೆ ನಟ ಧನುಷ್ ಗೆ ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸಲು ಅಭಿಮಾನಿಯೊಬ್ಬರು ಕೇಳಿದರು. ಅದಕ್ಕೆ ನಗುತ್ತಲೇ ಉತ್ತರ ನೀಡಿದ ನಟ, ನನಗೆ ಈಗ 40 ವರ್ಷ ವಯಸ್ಸಾಗಿದೆ. ಇನ್ನು ಮುಂದೆ ರೊಮ್ಯಾಂಟಿಕ್ ಸಿನಿಮಾದಲ್ಲಿ ನಾನು ನಟಿಸುವುದಿಲ್ಲ, ಈಗಿನ ಯುವ ನಟರು ಅಂತಹ ಸಿನಿಮಾಗಳಲ್ಲಿ ನಟಿಸಲಿ ಎಂದು ಅವರು ಉತ್ತರಿಸಿದ್ದಾರೆ.