ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ನಟ ದರ್ಶನ್ ಜೈಲುವಾಸ ಅನುಭವಿಸುತ್ತಿದ್ದಾರೆ. ನಟನನ್ನು ಭೇಟಿಯಾಗಲು ಧನ್ವೀರ್ ಜೈಲಿಗೆ ಆಗಮಿಸಿದ್ದು, ದರ್ಶನ್ ಜೊತೆ ಮಾತನಾಡಿ ವಾಪಾಸಾಗಿದ್ದಾರೆ.
ನಟನನ್ನು ನೋಡೋದಕ್ಕಾಗಿ ಜೈಲಿನ ಬಳಿ ಧನ್ವೀರ್ ಕಾಯ್ತಿದ್ದಾರೆ. ದರ್ಶನ್ ಓಕೆ ಅಂದರೆ ಮಾತ್ರ ಮಾತನಾಡಿಸಲು ಧನ್ವೀರ್‌ಗೆ ಅವಕಾಶ ನೀಡಲಾಗುತ್ತಿದ್ದು, ಅಂತೆಯೇ ದರ್ಶನ್ ಅವರ ಜೊತೆ ಮಾತನಾಡಲು ಇಚ್ಛೆಪಟ್ಟಿದ್ದಾರೆ.
ಜೈಲಿನಿಂದ ಬಂದ ಧನ್ವೀರ್ ದರ್ಶನ್ ಬಗ್ಗೆ ಮಾತನಾಡಿ, ಅವರು ಜಾಸ್ತಿ ಮಾತನಾಡೋ ಸ್ಥಿತಿಯಲ್ಲಿಲ್ಲ. ಸಿಕ್ಕಾಪಟ್ಟೆ ಬೇಜಾರಿನಲ್ಲಿದ್ದಾರೆ ಎಂದು ಹೇಳಿದ್ದಾರೆ.