ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟ ದುಲ್ಕರ್ ಸಲ್ಮಾನ್ (Dulquer Salmaan) ಇದೀಗ ತೆಲುಗಿನಲ್ಲಿ ಮತ್ತೊಮ್ಮೆ ಆರ್ಭಟಿಸಲು ಸಜ್ಜಾಗಿದ್ದು, ಈಗಾಗಲೇ ತೆಲುಗಿನಲ್ಲಿ ಎರಡು ಚಿತ್ರಗಳು ರಿಲೀಸ್ ಆಗಿದ್ದು, ಮೂರನೇ ಸಿನಿಮಾ ರೆಡಿ ಆಗುತ್ತಿದೆ.
ಇದೀಗ ವೆಂಕಿ ಅಟ್ಲೂರಿ (Venky Atluri)ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ (Lucky Baskar) ಎಂದು ಹೆಸರಿಡಲಾಗಿದೆ.
‘ಮಹಾನಟಿ’ ಮತ್ತು ಸೀತಾ ರಾಮಂ ಸಿನಿಮಾದ ಬಳಿಕ ತೆಲುಗಿನಲ್ಲೂ ದುಲ್ಕರ್ ಗೆ ಸಖತ್ ಬೇಡಿಕೆವಿದ್ದು, ಇದೀಗ ಹೊಸ ಸಿನಿಮಾದ ಟೈಟಲ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಿನಿಮಾ ಕಥೆ ಹಾಗೂ ತಾರಾಗಣದ ಬಗ್ಗೆ ಯಾವುದೇ ಮಾಹಿತಿ ನೀಡದೇ ಇದ್ದರೂ, ದುಲ್ಕರ್ ಬಗ್ಗೆ ತಂಡ ಅಪ್ ಡೇಟ್ ನೀಡುತ್ತಿದೆ.