ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮಲಯಾಳಂ ಪ್ರಸಿದ್ಧ ನಟ ಫಹಾದ್ ಫಾಸಿಲ್ ಅವರ ಜನ್ಮದಿನ. ನಟ ಫಾಸಿಲ್ ʼಪುಷ್ಪ 2ʼ ಚಿತ್ರದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಚಿತ್ರತಂಡವು ಖಳನಾಯಕನ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ.
2021ರಲ್ಲಿ ಸಿನಿ ರಸಿಕರ ಮನಗೆದ್ದ ʼಪುಷ್ಟʼ ಚಲನಚಿತ್ರದ ಮುಂದುವರಿದ ಭಾಗ ಇದಾಗಿದೆ. ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿರುವ ಫಾಸಿಲ್ ಅವರ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ.
‘ಪುಷ್ಪ’ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ನಟ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದು, ಬನ್ವರ್ ಸಿಂಗ್ ಶೆಖಾವತ್ ಎಂಬ ಅರಣ್ಯಾಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ʼಪುಷ್ಟ 2ʼ ಚಿತ್ರದಲ್ಲೂ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಸಿನಿರಸಿಕರಲ್ಲಿ ಕಾತುರ ಹೆಚ್ಚಿಸಿದೆ.
ತಂಡವು ಸಾಮಾಜಿಕ ಜಾಲತಾಣದಲ್ಲಿ ಖಳನಾಯಕನ ಫಸ್ಟ್ ಲುಕ್ ಹಂಚಿಕೊಂಡಿದ್ದು, ‘ಪ್ರತಿಭಾವಂತ ನಟರಾದ ಫಹಾದ್ ಫಾಸಿಲ್ ಅವರಿಗೆ ಪುಷ್ಪ 2 ತಂಡದಿಂದ ಜನ್ಮದಿನದ ಶುಭಾಶಯಗಳು. ಬನ್ವರ್ ಸಿಂಗ್ ಶೆಖಾವತ್ ಸರ್ ಅವರು ಸೇಡಿನೊಂದಿಗೆ ಮತ್ತೆ ದೊಡ್ಡ ಪರದೆ ಮೇಲೆ ಬರಲಿದ್ದಾರೆ’ ಎಂದು ಪೋಸ್ಟರ್ಗೆ ಕ್ಯಾಪ್ಷನ್ ನೀಡಿದ್ದಾರೆ.
https://www.instagram.com/p/Cvq-Xl4yFtQ/?utm_source=ig_embed&ig_rid=1a4acbee-5df3-474e-882c-eeb865bc248b