ಲೋಕಸಭಾ ಚುನಾವಣಾ ಅಖಾಡಕ್ಕೆ ನಟ ಕಮಲ್ ಹಾಸನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ಇದರ ನಡುವೆ ನಟ ಕಮಲ್ ಹಾಸನ್ ಕೂಡ ಚುನಾವಣೆ ಕಣದಲ್ಲಿ ಇರಲಿದ್ದಾರೆ ಎಂದು ಹೇಳಾಗುತ್ತಿದೆ.

ಈಗಾಗಲೇ ಒಂದು ಬಾರಿ ಚುನಾವಣೆಯನ್ನು ಎದುರಿಸಿ ಕಮಲ್ ಹಾಸನ್ ಸೋತಿದ್ದಾರೆ. ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸದಿಂದ ಕೊಯಮತ್ತೂರು ಕ್ಷೇತ್ರವನ್ನು ಆರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಆ ಕ್ಷೇತ್ರದಲ್ಲಿ ಒಂದಷ್ಟು ಕೆಲಸವನ್ನೂ ಮಾಡುತ್ತಿದ್ದಾರಂತೆ.

ಕಮಲ್ ಹಾಸನ್ ತಮ್ಮದೇ ಎಂ.ಎನ್.ಎಂ (M.N.M) ಪಕ್ಷವನ್ನು ಸ್ಥಾಪಿಸಿದ್ದಾರೆ. ಆ ಪಕ್ಷದ ರಾಜ್ಯಮಟ್ಟದ ಪ್ರಚಾರದ ಅಭಿಯಾನವನ್ನು ನಿನ್ನೆಯಿಂದ ಕೊಯಮತ್ತೂರು (Coimbatore) ದಕ್ಷಿಣ ಕ್ಷೇತ್ರದಿಂದ ಆರಂಭಿಸಿದ್ದಾರೆ.

ಕೊಯಮತ್ತೂರು ಕ್ಷೇತ್ರದಿಂದಲೇ ಸ್ಪರ್ಧಿಸುವ ಕುರಿತು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!