ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನಿಂದಲೇ ಕನ್ನಡ ಹುಟ್ಟಿದೆ ಎಂಬ ಕಮಲ್ ಹಾಸನ್ ಹೇಳಿಕೆ ಹಾಗೂ ಥಗ್‌ಲೈಫ್ ಬಿಡುಗಡೆ ಕುರಿತ ವಿಚಾರಣೆಯನ್ನು ಹೈಕೋರ್ಟ್ ಜೂ.20ಕ್ಕೆ ಮುಂದೂಡಿದೆ.
ಇಂದು ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರು, ಕಮಲ್ ಹಾಸನ್‌ಗೆ ಕ್ಷಮೆಯಾಚನೆ ಮತ್ತು ವಿವಾದ ಇತ್ಯರ್ಥ ಮಾಡಿಕೊಳ್ಳಲು ಒಂದು ವಾರ ಅವಕಾಶ ಕೋರಲಾಗಿತ್ತು. ಇನ್ನೂ ಕಮಲ್ ಹಾಸನ್ ಕ್ಷಮೆ ಕೇಳಲಿಲ್ವಾ? ಸುಪ್ರೀಂ ಕೋರ್ಟ್ ವಿಚಾರಣೆ ಏನಾಯ್ತು? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಮಲ್ ಪರ ವಕೀಲರು ಕ್ಷಮೆ ಕೇಳಿಲ್ಲ, ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಿದ್ದಾರೆ.
ಕೊನೆಗೆ ನ್ಯಾ.ನಾಗಪ್ರಸನ್ನ ಅವರು, ವಿವೇಚನೆಯೂ ಶೌರ್ಯದ ಅತ್ಯುತ್ತಮ ಭಾಗ. ವಿವೇಚನೆ ಬಳಸಿ ಎಂದು ಕಮಲ್ ವರ ವಕೀಲರಿಗೆ ತಿಳಿಸಿ ವಿಚಾರಣೆಯನ್ನು ಜೂನ್ 20ಕ್ಕೆ ವಿಚಾರಣೆ ಮುಂದೂಡಿದೆ.