ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಹ ಕಲಾವಿದೆಯ ಮೇಲೆ ಅತ್ಯಾಚಾರ ಎಸೆಗಿರುವ ಆರೋಪದ ಮೇಲೆ ಕಿರುತೆರೆ ನಟ ಮಡೇನೂರು ಮನುವಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ 3ನೇ ACMM ಕೋರ್ಟ್ ಆದೇಶ ಹೊರಡಿಸಿದೆ.
5 ದಿನಗಳ ಪೊಲಿಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಲತ್ತಹಳ್ಳಿಯಲ್ಲಿ ಮನುಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಯಿತು. ಮೆಡಿಕಲ್ ಟೆಸ್ಟ್ ನಡೆದ ಬಳಿಕ ಪೊಲೀಸರು ಮಧ್ಯಾಹ್ನ 3ನೇ ಎಸಿಎಂಎಂ ಕೋರ್ಟ್‌ಗೆ ಹಾಜರು ಪಡಿಸಿದರು.