ತೆಲಂಗಾಣ ಸರ್ಕಾರದ ಡ್ರಗ್ ವಿರೋಧಿ ಅಭಿಯಾನಕ್ಕೆ ಕೈ ಜೋಡಿಸಿದ ನಟ ಪ್ರಭಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆಲೆಬ್ರಿಟಿಗಳು ಏನೇ ಮಾಡಿದರೂ ಅಭಿಮಾನಿಗಳು ಎಂಜಾಯ್ ಮಾಡುತ್ತಾರೆ. ಅವರು ಹೇಳಿದ್ದನ್ನು ಫಾಲೋ ಮಾಡುತ್ತಾರೆ. ಇದಕ್ಕಾಗಿಯೇ ಸೆಲೆಬ್ರಿಟಿಗಳು ಸರ್ಕಾರಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯ ಪ್ರಭಾಸ್ ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ತೆಲಂಗಾಣ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ.

ಅವರು ಡ್ರಗ್ಸ್ ಬೇಡ ಎಂಬ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದೆ.

‘ನಮ್ಮ ಜೀವನದಲ್ಲಿ ಹಲವು ಖುಷಿಗಳಿವೆ. ಸಾಕಷ್ಟು ಮನರಂಜನೆ ಇದೆ. ಡಾರ್ಲಿಂಗ್ಸ್, ಡ್ರಗ್ಸ್ ಬೇಡ. ನಮ್ಮನ್ನು ಪ್ರೀತಿಸುವ ಮತ್ತು ಬದುಕುವ ಜನರಿರುವಾಗ ನಮಗೆ ಈ ಡ್ರಗ್ಸ್ ಬೇಕೇ? ಡ್ರಗ್ಸ್ ತೆಗೆದುಕೊಳ್ಳಬೇಡಿ. ನಿಮಗೆ ತಿಳಿದಿರುವ ಯಾರಾದರೂ ಮಾದಕ ವ್ಯಸನಿಗಳಾಗಿದ್ದರೆ, ಇಂದೇ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ. ಅವರ ಸಂಪೂರ್ಣ ಚೇತರಿಕೆಗೆ ತೆಲಂಗಾಣ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಪ್ರಭಾಸ್ ವಿಡಿಯೋದಲ್ಲಿ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!