50ನೇ ವಯಸ್ಸಿನಲ್ಲಿ ಹೆಣ್ಣು ಮಗುವಿನ ತಂದೆಯಾದ ನಟ ಪ್ರಭುದೇವ!

ಹೊಸದಿಂಗತ ಡಿಜಿಟಲ್‌ ಡೆಸ್ಕ್:‌

ನಟ, ಡ್ಯಾನ್ಸರ್‌, ನಿರ್ದೇಶಕ, ನಿರ್ಮಾಪಕ, ಕೊರಿಯೋಗ್ರಾಫರ್‌ ಪ್ರಭುದೇವ ಅವರ 2 ನೇ ಪತ್ನಿ ಹಿಮಾನಿ ಸಿಂಗ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಮೂಲಕ 50ನೇ ವಯಸ್ಸಿನಲ್ಲಿ ಪ್ರಭುದೇವ ಹೆಣ್ಣು ಮಗುವಿನ ತಂದೆ ಆಗಿದ್ದಾರೆ.

ಪ್ರಭುದೇವ ಮೊದಲ ಪತ್ನಿ ಹೆಸರು ರಮ್ಲತ್‌. ಇವರು ಮೂಲತಃ ಮುಸ್ಲಿಂ ಆಗಿದ್ದು, ಮದುವೆ ನಂತರ ಹಿಂದೂ ಧರ್ಮಕ್ಕೆ ಮತಾಂತರವಾದರು. ನಂತರ ರಮ್ಲತಾ ಎಂದು ಹೆಸರು ಬದಲಿಸಿಕೊಂಡು. ಇಬ್ಬರೂ ಕೆಲವು ವರ್ಷಗಳ ಕಾಲ ಪ್ರೀತಿಸಿ 1995 ರಲ್ಲಿ ಮದುವೆ ಆದರು. ಈ ದಂಪತಿಗೆ ಮೂವರು ಗಂಡು ಮಕ್ಕಳು. 2008 ರಲ್ಲಿ ಪ್ರಭುದೇವ ಮೊದಲ ಮಗ ಕ್ಯಾನ್ಸರ್‌ ಕಾರಣದಿಂದ ನಿಧನರಾದರು. 2011ರಲ್ಲಿ ಪ್ರಭುದೇವ ಮೊದಲ ಪತ್ನಿಗೆ ಡಿವೋರ್ಸ್‌ ನೀಡಿದ್ದರು.

ಮೊದಲ ಪತ್ನಿಯಿಂದ ದೂರಾದ ನಂತರ ಒಬ್ಬಂಟಿಯಾಗೇ ಇದ್ದ ಪ್ರಭುದೇವ ಕೊರೋನಾ ಸಮಯದಲ್ಲಿ ಎರಡನೇ ಮದುವೆ ಆದರು. ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಹೋಗಿದ್ದ ಪ್ರಭುದೇವ ಅದೇ ಡಾಕ್ಟರನ್ನು ಪ್ರೀತಿಸಿ ಕುಟುಂಬದವರ ಸಮ್ಮುಖದಲ್ಲಿ ಮದುವೆ ಆದರು.

ಇತ್ತೀಚೆಗಷ್ಟೇ ಹಿಮಾನಿ ಸಿಂಗ್ ಜೊತೆ ಪ್ರಭುದೇವ ಮದುವೆ ಆಗಿರುವ ವಿಚಾರ ಬಹಿರಂಗವಾಗಿತ್ತು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಭುದೇವ ಎರಡನೇ ಮದುವೆ ವಿಚಾರವನ್ನು ಹಂಚಿಕೊಂಡಿದ್ದರು. ಹಿಮಾನಿ ಜೊತೆಗಿನ ಪರಿಚಯ, ಪ್ರೀತಿ-ಪ್ರೇಮ, ಮದುವೆ ಎಲ್ಲವನ್ನೂ ಜನರೆದುರು ತೆರೆದಿಟ್ಟಿದ್ದರು. ಇದೀಗ ಹಿಮಾನಿ ಮತ್ತು ಪ್ರಭುದೇವ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!