ನಟ, ನಿರ್ಮಾಪಕ ಧೀರಜ್ ಕುಮಾರ್ ಆಸ್ಪತ್ರೆಗೆ ದಾಖಲು! ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿನಿಮಾ ಮತ್ತು ಟಿವಿ ಜಗತ್ತಿನಲ್ಲಿ ಚಿರಪರಿಚಿತರಾಗಿರುವ ಧೀರಜ್ ಕುಮಾರ್ ಅವರ ಬಗ್ಗೆ ಇತ್ತೀಚೆಗೆ ಕೇಳಿಬಂದ ಸುದ್ದಿ ಅಭಿಮಾನಿಗಳಿಗೆ ದುಃಖ ತರಿಸಿದೆ. ಧೀರಜ್ ಕುಮಾರ್ ಅವರು ತೀವ್ರ ನ್ಯುಮೋನಿಯಾ ದಿಂದಾಗಿ ಆಸ್ಪತ್ರೆಗೆ ದಾಖಾಲಾಗಿದ್ದರೆ.

ಇತ್ತೀಚೆಗೆ ಧೀರಜ್ ಕುಮಾರ್ ಅವರ ಆರೋಗ್ಯ ಹಠಾತ್ತನೆ ಹದಗೆಟ್ಟಿದೆ. ತಕ್ಷಣ ಅವರನ್ನು ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ವರದಿಗಳ ಪ್ರಕಾರ, ಅವರು ಪ್ರಸ್ತುತ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಅವರ ಕುಟುಂಬ ಹಾಗೂ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆಯಾದ ಅಧಿಕೃತ ಹೇಳಿಕೆಯಲ್ಲಿ, “ಧೀರಜ್ ಕುಮಾರ್‌ ಅವರ ಆರೋಗ್ಯವನ್ನು ವೈದ್ಯರು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅಗತ್ಯವಿರುವ ಎಲ್ಲಾ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಸಮಯದಲ್ಲಿ ಅವರ ಗುಪ್ತತೆಯನ್ನು ಗೌರವಿಸಿ, ಶೀಘ್ರ ಚೇತರಿಕೆಗೆ ಪ್ರಾರ್ಥನೆ ಮಾಡಬೇಕೆಂದು ನಮ್ಮ ಮನವಿ” ಎಂದು ತಿಳಿಸಿದ್ದಾರೆ.

ಧೀರಜ್ ಕುಮಾರ್‌ ಅವರು 1965 ರಲ್ಲಿ ಪ್ರತಿಭಾ ಸ್ಪರ್ಧೆಯ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಆ ಸಮಯದಲ್ಲಿ ಅವರೊಂದಿಗೆ ಸುಭಾಷ್ ಘಾಯ್ ಮತ್ತು ರಾಜೇಶ್ ಖನ್ನಾ ಕೂಡ ಭಾಗವಹಿಸಿದ್ದರು. ರಾಜೇಶ್ ಖನ್ನಾ ಆ ಸ್ಪರ್ಧೆಯಲ್ಲಿ ಗೆದ್ದು ಹೊರ ಬಂದರೂ, ಧೀರಜ್ ಕುಮಾರ್ ತಮ್ಮದೇ ಆದ ಮಾರ್ಗದಲ್ಲಿ ಯಶಸ್ಸಿನ ಓಟ ಮುಂದುವರಿಸಿದರು.

1970 ರಿಂದ 1984 ರವರೆಗೆ ಅವರು 21ಕ್ಕೂ ಹೆಚ್ಚು ಪಂಜಾಬಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ‘ಸ್ವಾಮಿ’ ಚಿತ್ರದ ಪ್ರಸಿದ್ಧ ಹಾಡು ‘ಕಾ ಕರುಣ್ ಸಜ್ನಿ, ಆಯೇ ನ ಬಲಮ್’ ಅವರ ಮೇಲೇ ಚಿತ್ರೀಕರಿಸಲ್ಪಟ್ಟಿದೆ. ಇದಲ್ಲದೆ, ‘ಹೀರಾ ಪನ್ನಾ’, ‘ರತೋಂ ಕಾ ರಾಜಾ’ ಮುಂತಾದ ಚಲನಚಿತ್ರಗಳಲ್ಲಿ ಕೂಡಾ ಅವರು ಗಮನಸೆಳೆಯುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟಿವಿ ಲೋಕದಲ್ಲೂ ತಮ್ಮದೇ ಛಾಪು ಮೂಡಿಸಿದ ಧೀರಜ್
ಧೀರಜ್ ಕುಮಾರ್ ಕೇವಲ ಒಬ್ಬ ನಟ ಮಾತ್ರವಲ್ಲ, ಪ್ರತಿಭಾನ್ವಿತ ನಿರ್ಮಾಪಕರೂ ಹೌದು. ಅವರು ಸ್ಥಾಪಿಸಿದ ‘ಕ್ರಿಯೇಟಿವ್ ಐ’ ಸಂಸ್ಥೆಯು ಹಲವು ಜನಪ್ರಿಯ ಧಾರಾವಾಹಿಗಳನ್ನು ಪರದೆಗೆ ತಂದಿದೆ. ಅವರು ಸಂಸ್ಥೆಯ ಅಧ್ಯಕ್ಷರಾಗಿದ್ದು, ರಚನೆ, ನಿರ್ದೇಶನ ಹಾಗೂ ನಿರ್ವಹಣೆಯ ಎಲ್ಲ ಹಂತಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಇವರ ನಿರ್ಮಾಣದ ಟಿವಿ ಶೋಗಳು ಹಲವು ವರ್ಷಗಳಿಂದ ಪ್ರೇಕ್ಷಕರ ಮನ ಗೆದ್ದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!