ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಾಕು ಇರಿತಕ್ಕೆ ಒಳಗಾಗಿದ್ದ ನಟ ಸೈಫ್ ಆಲಿಖಾನ್ ಗೆ ಶಸ್ತ್ರ ಚಿಕಿತ್ಸೆ ಮೂಲಕ ಬೆನ್ನಿನಲ್ಲಿ ಹೊಕ್ಕಿದ್ದಂತ ಚಾಕುವನ್ನು ಹೊರ ತೆಗೆಯಲಾಗಿತ್ತು. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಐಸಿಯುನಿಂದ ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ಈ ಕುರಿತಂತೆ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ನಟ ಸೈಫ್ ಆಲಿಖಾನ್ ಅವರ ಆರೋಗ್ಯದ ಬಗ್ಗೆ ಹೆಲ್ತ್ ಬುಲೆಟಿನ್ ಬಿಡಗಡೆ ಮಾಡಲಾಗಿದೆ. ಅದರಲ್ಲಿ ಬೆನ್ನುಹುರಿಯಲ್ಲಿ ಇನ್ನೂ ಗಾಯ ಹಸಿಯಾಗಿದೆ. ಹೀಗಾಗಿ ಅವರು ಕೆಲ ದಿನಗಳವರೆಗೆ ರೆಸ್ಟ್ ತೆಗೆದುಕೊಳ್ಳುವ ಅವಶ್ಯಕತೆ ಇರುವುದಾಗಿ ತಿಳಿಸಿದೆ.
ಸದ್ಯ ನಟ ಸೈಫ್ ಆಲಿಖಾನ್ ಚೇತರಿಸಿಕೊಳ್ಳುತ್ತಿದ್ದಾರೆ. ನಡೆದಾಡಲು ಯಾವುದೇ ತೊಂದರೆ ಇಲ್ಲ. ಆದ್ರೆ ಸೋಂಕಿನ ಭೀತಿ ಹಿನ್ನಲೆಯಲ್ಲಿ ನಡೆದಾದಂತೆ ಸಲಹೆ ನೀಡಿದ್ದೇವೆ ಎಂಬುದಾಗಿ ಹೇಳಿದೆ.
ಇದೀಗ ನಟ ಸೈಫ್ ಆಲಿಖಾನ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡ ಕಾರಣ ಐಸಿಯುನಿಂದ ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಹಣ್ಣಿನ ಜ್ಯೂಸ್ ಸೇವಿಸುವುದಕ್ಕೆ ತಿಳಿಸಲಾಗಿದೆ. ವಿಶ್ರಾಂತಿ ಅಗತ್ಯವಿದೆ ಎಂಬುದಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.