ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್‌ರನ್ನ ಅರೆಸ್ಟ್ ಮಾಡಿದ್ದು, ಇದು ಶಾಕಿಂಗ್ ವಿಷಯ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ.
ಈ ಸುದ್ದಿ ನೋಡಿ ಶಾಕ್ ಆಗಿದೆ. ಚಿಂತೆ ಕಾಡ್ತಿದೆ. ದೇವರ ಬಳಿ ಬೇಡ್ಕೋತಿದ್ದೇನೆ, ಇದೆಲ್ಲಾ ಸುಳ್ಳು ಆರೋಪವಾಗಿರಲಿ. ಅವರು ಬಿಡುಗಡೆ ಆಗಲಿ ಎಂದು ಕೇಳಿಕೊಳ್ಳುತ್ತೇನೆ. ಅವರ ಹೆಸರು ಎಫ್ಐಆರ್ನಲ್ಲಿರಬಾರದು ಎಂದು ಕೇಳಿಕೊಳ್ಳುತ್ತೇನೆ. ನನಗೆ ಮಾತೇ ಬರುತ್ತಿಲ್ಲ ಎಂದಿದ್ದಾರೆ.