ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಷಾಢ ಮಾಸದ ಹಿನ್ನೆಲೆ ನಟ ಶಿವರಾಜ್‌ಕುಮಾರ್ ತಮ್ಮ ಪತ್ನಿ ಜೊತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಂಗಳವಾರ ರಾತ್ರಿ ಬೆಟ್ಟಕ್ಕೆ ಆಗಮಿಸಿದ ದಂಪತಿ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿದರು. ಮೊನ್ನೆಯಷ್ಟೇ ಪತ್ನಿ ಜೊತೆಗೂಡಿ ಶಿವಣ್ಣ ಕಬಿನಿ ಡ್ಯಾಂಗೆ ಭೇಟಿ ನೀಡಿದ್ದರು.
1986ರಲ್ಲಿ ‘ಆನಂದ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಶಿವಣ್ಣ ಎಂಟ್ರಿ ಕೊಟ್ಟರು. ಸಿನಿ ಜರ್ನಿಯಲ್ಲಿ 40 ವರ್ಷ ಪೂರೈಸಿದ್ದಾರೆ.