ನಟ ಸಿದ್ಧಾರ್ಥ್‌ ಸಿನಿಮಾಗೆ ತಟ್ಟಿದ ಕಾವೇರಿ ಹೋರಾಟದ ಬಿಸಿ, ಪ್ರೆಸ್‌ಮೀಟ್‌ ನಡೆಸದಂತೆ ತಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಈಗಾಗಲೇ ಕಾವೇರಿ ನೀರಿಗಾಗಿ ಹೋರಾಟ ಭುಗಿಲೆದ್ದಿದೆ. ಈ ನಡುವೆ ತಮಿಳು ನಟ ಸಿದ್ಧಾರ್ಥ್‌ ನಟನೆಯ ʻಚಿಕ್ಕುʼ ಸಿನಿಮಾಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಪ್ರಮೋಷನ್‌ಗಾಗಿ ಬೆಂಗಳೂರಿಗೆ ಬಂದಿದ್ದ ನಟನಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಮಲ್ಲೇಶ್ವರದಲ್ಲಿರುವ ಎಸ್​ಆರ್​​ವಿ ಥಿಯೇಟರ್​ನಲ್ಲಿ ‘ಚಿಕ್ಕು’ ಸಿನಿಮಾದ ಪ್ರೆಸ್​ಮೀಟ್​ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಕರವೇ ಕಾರ್ಯಕರ್ತರು ಸುದ್ದಿಗೋಷ್ಠಿ ತಡೆದು ನಟ ಸಿದ್ಧಾರ್ಥ್‌ ಹಾಗೂ ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ನೀರಿಗಾಗಿ ಇಷ್ಟು ದೊಡ್ಡ ಮಟ್ಟದ ಗಲಾಟೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇದೆಲ್ಲಾ ಬೇಕಾ ಎಂದು ನಟನನ್ನು ಪ್ರಶ್ನಿಸಿದರು.

ಪ್ರೆಸ್‌ಮೀಟ್‌ ಬಿಟ್ಟು ಕಾವೇರಿ ಹೋರಾಟಕ್ಕಿಳಿಯುವಂತೆ ಪ್ರೆಸ್‌ಮೀಟ್‌ನಲ್ಲಿ ಭಾಗವಹಿಸಿದ್ದವರಲ್ಲಿ ಕರವೇ ಕಾರ್ಯಕರ್ತರು ಮನವಿ ಮಾಡಿದರು. ಕರವೇ ಕಾರ್ಯಕರ್ತರ ಗಲಾಟೆಯಿಂದ ಪ್ರೆಸ್‌ಮೀಟ್‌ ಬಿಟ್ಟು ನಟ ಸಿದ್ಧಾರ್ಥ್‌ ಅರ್ಧದಲ್ಲೇ ಹೊರನಡೆದ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!