ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಪ್ತಸಾಗರದಾಚೆ ಎಲ್ಲೋ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಡೈರೆಕ್ಟರ್ ಹೇಮಂತ್ ರಾವ್ ಇದೀಗ ಸೂಪರ್ ಸ್ಟಾರ್‌ಗೆ ಕಿಚ್ಚ ಸುದೀಪ್‌ಗೆ ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ.
ಘೋಸ್ಟ್ ಖ್ಯಾತಿಯ ನಿರ್ಮಾಪಕ ಸಂದೇಶ್ ನಾಗರಾಜ ಅವರು ಸುದೀಪ್ ಜೊತೆ ಸಿನಿಮಾ ಮಾಡೋದಾಗಿ ಇತ್ತೀಚೆಗೆ ಅಧಿಕೃತ ಘೋಷಣೆ ಮಾಡಿದ್ದರು. ಆದರೆ ನಿರ್ದೇಶನ ಯಾರದ್ದು, ಎಂಬುದನ್ನು ರಿವೀಲ್ ಆಗಿರಲಿಲ್ಲ. ಆದರೆ ಸಂದೇಶ್ ಮತ್ತು ಸುದೀಪ್ ಕಾಂಬಿನೇಷನ್ ಚಿತ್ರಕ್ಕೆ ಹೇಮಂತ್ ರಾವ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ.