ಸಿನಿಮಾ ಶೂಟಿಂಗ್ ವೇಳೆ ನಟ ಸೂರ್ಯಗೆ ಗಾಯ: ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳು ನಟ ಸೂರ್ಯಗೆ ಕಂಗುವಾ’ ಚಿತ್ರದ ಶೂಟಿಂಗ್ ವೇಳೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚೆನ್ನೈನ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ.ಚಿತ್ರದ ಶೂಟಿಂಗ್​​ ಸೆಟ್‌ನಲ್ಲಿಂದು ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಅದ್ಧೂರಿ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಸೂರ್ಯ ಮೇಲೆ ರೋಪ್ ಕ್ಯಾಮೆರಾ ಬಿದ್ದಿದ್ದು, ನಟನ ಭುಜಕ್ಕೆ ಗಾಯವಾಗಿದೆ.ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ.

ಬಹುನಿರೀಕ್ಷಿತ ‘ಕಂಗುವ’ ಸಿನಿಮಾದ ಪೋಸ್ಟರ್ ಮತ್ತು ಟೀಸರ್ ಈಗಾಗಲೇ ಬಿಡುಗಡೆ ಆಗಿ ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಚಿತ್ರೀಕರಣದ ಅಂತಿಮ ಹಂತ ತಲುಪಿದೆ. ಕಂಗುವ ಪೀರಿಯಾಡಿಕಲ್​ ಡ್ರಾಮಾ ಆಗಿದ್ದು, ಬರೋಬ್ಬರಿ 38 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!