ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಹಿರಿಯ ನಟ, ರಾಜಕಾರಣಿ ವಿಜಯ್ ಕಾಂತ್ ದೀರ್ಘಕಾಲದ ಅನಾರೋಗ್ಯ, ಜೊತೆಗೆ ಕೊರೋನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ತಮ್ಮ ಹುಟ್ಟೂರಿನಲ್ಲಿ ವಿಜಯ್ ಸೂರ್ಯ ಅವರ ಅಂತ್ಯಕ್ರಿಯೆ ನೆರವೇರಲಿದೆ.
ನಟ ವಿಜಯ್ ಕಾಂತ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ವಿಜಯ್ ಅವರಿಗೆ ಕೊರೋನಾ ಕೂಡ ಬಾಧಿಸಿದ್ದು, ಏಕಾಏಕಿ ಉಸಿರುಚೆಲ್ಲುವಂತೆ ಮಾಡಿತ್ತು. ಅನೇಕ ಗಣ್ಯರು, ಅಭಿಮಾನಿಗಳು ವಿಜಯ್ ನಿಧನಕ್ಕೆ ಕಣ್ಣೀರಿಟ್ಟಿದ್ದಾರೆ.
ವಿಜಯ್ ಅವರ ಮನೆಯ ಬಳಿಯಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಿಎಂ ಸ್ಟಾಲಿನ್ ಹಾಗೂ ಇನ್ನಿತರ ಗಣ್ಯರು ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸ್ಥೈರ್ಯ ನೀಡಿದ್ದಾರೆ.