ನಟ ವಿಜಯ್​ ಮೊದಲ ರಾಜಕೀಯ ಸಮಾವೇಶಕ್ಕೆ ಹರಿದುಬಂತು ಜನಸಾಗರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ವಿಜಯ್ ತಮ್ಮ ಪಕ್ಷವಾದ ತಮಿಳಗ ವೆಟ್ರಿ ಕಳಗಂನ ಮೊದಲ ಸಮಾವೇಶ ವಿಲುಪುರಂ ಜಿಲ್ಲೆಯ ವಿಕ್ರವಂಡಿ ಪ್ರದೇಶದಲ್ಲಿ ನಡೆಸಿದ್ದು, ಲಕ್ಷಾಂತರ ಜನ ಭಾಗಿಯಾಗಿದ್ದಾರೆ. ನಟ ವಿಜಯ್ ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.

ಈ ಸಮಾವೇಶಕ್ಕೆ ಜನಸಾಗರವೇ ಹರಿದುಬಂದಿದ್ದು, ಬಿರು ಬಿಸಿಲಿನ ನಡುವೆಯೇ ಅಭಿಮಾನಿಗಳು ನಟನನ್ನು ಕಣ್ತುಂಬಿಕೊಂಡಿದ್ದಾರೆ.

ದ್ರಾವಿಡ ರಾಷ್ಟ್ರೀಯತೆ ಮತ್ತು ತಮಿಳು ರಾಷ್ಟ್ರೀಯತೆಯನ್ನು ನಾವು ಪ್ರತ್ಯೇಕಿಸುವುದಿಲ್ಲ, ಈ ಮಣ್ಣಿನ ಎರಡು ಕಣ್ಣುಗಳು. ಯಾವುದೇ ನಿರ್ದಿಷ್ಟ ಗುರುತಿಗೆ ನಮ್ಮನ್ನು ನಾವು ಸಂಕುಚಿತಗೊಳಿಸಬಾರದು. ಜಾತ್ಯತೀತ ಸಾಮಾಜಿಕ ನ್ಯಾಯದ ಸಿದ್ಧಾಂತಗಳು ನಮ್ಮ ಸಿದ್ಧಾಂತಗಳಾಗಿವೆ ಎಂದು ನಟ ಮತ್ತು ಟಿವಿಕೆ ಅಧ್ಯಕ್ಷ ವಿಜಯ್ ಹೇಳಿದ್ದಾರೆ.

ರಾಜಕೀಯವು ಸಿನಿ ಕ್ಷೇತ್ರವಲ್ಲ.ಇದು ಯುದ್ಧಭೂಮಿ. ಇದು ಸ್ವಲ್ಪ ಗಂಭೀರವಾಗಿದೆ. ರಾಜಕೀಯದಲ್ಲಿನ ವೈಫಲ್ಯಗಳು ಮತ್ತು ಯಶಸ್ಸಿನ ಕಥೆಗಳನ್ನು ಓದಿದ ನಂತರ ನಾನು ನನ್ನ ವೃತ್ತಿಜೀವನವನ್ನು ಉತ್ತುಂಗಕ್ಕೇರಿಸಿದೆ ಮತ್ತು ನಿಮ್ಮೆಲ್ಲರನ್ನು ನಂಬಿ ನಾನು ನಿಮ್ಮ ವಿಜಯ್ ಆಗಿ ಇದ್ದೇನೆ ಎಂದು ಹೇಳಿದ್ದಾರೆ.

ಇಲ್ಲಿ ಒಂದು ಗುಂಪು ಒಂದೇ ಹಾಡನ್ನು ಹಾಡುತ್ತಿದೆ, ರಾಜಕೀಯಕ್ಕೆ ಬಂದವರಿಗೆ ನಿರ್ದಿಷ್ಟ ಬಣ್ಣ ಹಚ್ಚಿ ಜನರನ್ನು ವಂಚಿಸುತ್ತಿದ್ದಾರೆ. ದ್ರಾವಿಡ ಮಾದರಿಯ ಹೆಸರಿನಲ್ಲಿ ಅವರು ಜನರನ್ನು ಮೋಸ ಮಾಡುತ್ತಿದ್ದಾರೆ. ಜನ ವಿರೋಧಿ ಸರ್ಕಾರವಾಗಿದೆ ಎಂದು ಟೀಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!