Friday, January 9, 2026

CINE | 40ನೇ ವರ್ಷದ ಹುಟ್ಟುಹಬ್ಬ ಸಂಭ್ರಮದಲ್ಲಿ ನಟ ಯಶ್‌, ಅಭಿಮಾನಿಗಳಿಂದ ಶುಭಾಶಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಯಶ್‌ಗೆ ಇಂದು ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರ್ತ್​​ಡೇ ದಿನವನ್ನು ಸಂಭ್ರಮಿಸುತ್ತಿದ್ದಾರೆ.

ವಿವಿಧ ಕಡೆಗಳಿಂದ ಅವರಿಗೆ ಬರ್ತ್​​ಡೇ ವಿಶ್​​ಗಳು ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ನಟನಿಗೆ ವಿಶಸ್‌ ಮಾಡಲಾಗುತ್ತಿದೆ. ಹಿಗಿರುವಾಗಲೇ ಯಶ್ ಅವರ ಬರ್ತ್​ಡೇ ದಿನ ಒಂದು ವಿಶೇಷ ಘೋಷಣೆ ಆಗುತ್ತದೆಯೇ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅಷ್ಟಕ್ಕೂ ಏನದು ಆ ಘೋಷಣೆ? 

ಯಶ್ ಅವರಿಗೆ ಇದು 40ನೇ ವರ್ಷದ ಹುಟ್ಟುಹಬ್ಬ. ಮೈಸೂರಿನಲ್ಲಿ ಜನಿಸಿದ ಅವರು ಬೆಂಗಳೂರಿಗೆ ಬಂದು ನಟನೆ ಆರಂಭಿಸಿದರು. ಮೊದಲು ಧಾರಾವಾಹಿಗಳಲ್ಲಿ ನಟಿಸಿದ ಅವರು ನಂತರ ಸಿನಿಮಾಗಳನ್ನು ಮಾಡಿದರು. ಈಗ ಸೂಪರ್ ಸ್ಟಾರ್ ಆಗಿದ್ದಾರೆ. ಝೀರೋದಿಂದ ಆರಂಭಿಸಿ ಇಂದು ಹೀರೋ ಆಗಿದ್ದಾರೆ. ಈ ಕಾರಣದಿಂದಲೇ ಅವರ ಅಭಿಮಾನಿ ಬಳಗ ಸ್ವಲ್ಪ ಹಿರಿದಾಗಿಯೇ ಇದೆ. ಈಗ ಯಶ್​​ಗೆ ಎಲ್ಲ ಕಡೆಗಳಿಂದ ಜನ್ಮದಿನದ ವಿಶ್ ಬರುತ್ತಿದೆ. ಇದರ ಜೊತೆ ಒಂದು ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದುವೇ ‘ಕೆಜಿಎಫ್ 3’.

ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಬಂದ ‘ಕೆಜಿಎಫ್ 2’ ಕೂಡ ಗಮನ ಸೆಳೆಯಿತು. ಈ ಸಿನಿಮಾದ ಕೊನೆಯಲ್ಲಿ ‘ಕೆಜಿಎಫ್ 3’ ಬಗ್ಗೆ ಘೋಷಣೆ ಮಾಡಲಾಯಿತು. ಇದಕ್ಕಾಗಿ ಅಭಿಮಾನಿಗಳು ಕಾದು ಕುಳಿತುಕೊಳ್ಳುವಂತೆ ಆಯಿತು. ಆದರೆ, ಈವರೆಗೆ ಸಿನಿಮಾದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಇಂದಾದ್ರೂ ಏನಾದ್ರೂ ಅಪ್ಡೇಟ್‌ ಸಿಗಬಹುದೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

error: Content is protected !!