ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಡಿಸೈನರ್ ಮಸಾಬಾ ಗುಪ್ತಾ ಅದಿತಿ ರಾವ್ ಹೈದರಿ ಅವರ ಮಾಜಿ ಪತಿ ಸತ್ಯದೀಪ್ ಮಿಶ್ರಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅದಿತಿ ರಾವ್ ಹೈದರಿ ಸತ್ಯಜಿತ್ ಮೊದಲ ಪತ್ನಿಯಾಗಿದ್ದು, ಮದುವೆಯಾದ ಕೆಲ ತಿಂಗಳಲ್ಲೇ ಮದುವೆ ಮುರಿದು ಬಿದ್ದಿತ್ತು. ಕೆಲ ದಿನಗಳ ನಂತರ ಈ ದಂಪತಿ ವಿಚ್ಛೇದನ ಪಡೆದು ದೂರವಾಗಿದ್ದರು.
ಮಸಾಬಾ ಅವರಿಗೂ ಇದು ಎರಡನೇ ಮದುವೆಯಾಗಿದ್ದು, 2015ರಲ್ಲಿ ನಿರ್ಮಾಪಕ ಮಧು ಮಂಟೇನಾ ಅವರನ್ನು ವರಿಸಿದ್ದರು. ಮದುವೆ ಬಗ್ಗೆ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ನನ್ನ ಶಾಂತ ಸಾಗವನ್ನು ಮದುವೆಯಾಗಿದ್ದೇನೆ, ಪ್ರೀತಿ, ಶಾಂತಿ, ನಗು ಜೀವಿತಾವಧಿವರೆಗೂ ಸಿಗಲಿದೆ ಎಂದು ಕ್ಯಾಪ್ಷನ್ ಹಾಕಿದ್ದಾರೆ.