ಸೈಬರ್ ವಂಚನೆ ವಿರುದ್ಧ ಜಾಗೃತಿ ಮೂಡಿಸಲು ಕೇರಳ ಪೊಲೀಸರಿಗೆ ನಟಿ ಭಾವನಾ ಸಾಥ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಕೇರಳ ಪೊಲೀಸರು ಇದೀಗ ಸೈಬರ್ ವಂಚನೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಜಾಹಿರಾತಿಗೆ ಮೊರೆಹೋಗಿದ್ದು, ಇದರಲ್ಲಿ ನಟಿ ಭಾವನಾ ಕಾಣಿಸಿಕೊಂಡಿದ್ದಾರೆ.

ಈ ಬಗ್ಗೆ ಪೊಲೀಸರು ಅತ್ಯಾಕರ್ಷಕ ವಿಡಿಯೋ ಸಿದ್ಧಗೊಳಿಸಿದ್ದು, ಇದರಲ್ಲಿ ನಟಿ ಭಾವನಾ, ಸೈಬರ್ ವಂಚನೆಯ ಸಂದರ್ಭದಲ್ಲಿ ಯಾವುದೇ ನೆರವಿಗಾಗಿ 1930ಗೆ ಕರೆ ಮಾಡುವಂತೆ ಸಲಹೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಕೆರಳ ಪೊಲೀಸರ ಈ ಕಿರುಚಿತ್ರ ಇನ್ನೂ ಹಲವು ಅಂಶಗಳನ್ನು ಒಳಗೊಂಡಿದ್ದು, ಎಲ್ಲರ ಮನಸೆಳೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!