ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಭೇಟಿ ನೀಡಿ, ಪಾರ್ಥನೆ ಸಲ್ಲಿಸಿದ್ದಾರೆ. 65 ಅಡಿ ಎತ್ತರದ ಭವ್ಯವಾದ ಶಿವನ ಪ್ರತಿಮೆ ಹಾಗೂ ಧ್ಯಾನ ಮಂದಿರವನ್ನು ಹೊಂದಿರುವ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದರು.
ಇದೇ ವೇಳೆ ದೇವಸ್ಥಾನದ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಏರ್-ಆತ್ಮನ್ ಇನ್ ರವಿ ಅವರ ಜೊತೆ ಮಾತುಕತೆ ನಡೆಸಿದರು. ಅವರ ಭೇಟಿ ಕುರಿತು ಮಾತನಾಡಿದ ಕಂಗನಾ, ಏರ್ ಆತ್ಮನ್ ಜೊತೆಗಿನ ಸಂಭಾಷಣೆ ಬಹಳ ಅರ್ಥಪೂರ್ಣವಾಗಿತ್ತು. ಅವರ ಆಂತರಿಕ ಆಧ್ಯಾತ್ಮಿಕ ದೃಷ್ಟಿಕೋನ ನನ್ನಲ್ಲಿ ಪ್ರತಿಧ್ವನಿಸುತ್ತದೆ. ನಾನು ಬೆಂಗಳೂರಿನಲ್ಲಿರುವಾಗಲೆಲ್ಲಾ, ಧ್ಯಾನ ಮಾಡಲು ಇಲ್ಲಿಗೆ ಬರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.