ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಅದ್ಭುತ ಹೆಗ್ಗಳಿಕೆ ನಟಿ ದೀಪಿಕಾ ಪಡುಕೋಣೆ ಪಾತ್ರರಾಗಿದ್ದಾರೆ. ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ 2026ರ ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಸ್ಟಾರ್ ನೀಡಿ ಗೌರವಿಸಿದೆ.
ಮನರಂಜನಾ ಉದ್ಯಮಕ್ಕೆ ನೀಡಿದ ಕೊಡುಗೆಗಳ ಮೂಲಕ, ದೀಪಿಕಾ ಪಡುಕೋಣೆ ಅವರು ಜಾಗತಿಕ ಮಟ್ಟದಲ್ಲಿ ತುಂಬಾನೇ ಗಮನಾರ್ಹ ಉಪಸ್ಥಿತಿಯನ್ನು ಸ್ಥಾಪಿಸಿಕೊಂಡಿದ್ದಾರೆ. ನೇರ ಪ್ರಸಾರದ ಮೂಲಕ ಮಾಡಲಾದ ಈ ಘೋಷಣೆಯು ವಿಶೇಷವಾಗಿ ಗಮನಾರ್ಹವಾಗಿದೆ, ಏಕೆಂದರೆ ನಟಿ ದೀಪಿಕಾ ಅವರು ಈ ವಿಶಿಷ್ಟ ಗೌರವವನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ.
ಎಮಿಲಿ ಬ್ಲಂಟ್, ಟಿಮೊಥಿ ಚಲಮೆಟ್, ರಾಮಿ ಮಲೆಕ್, ರಾಚೆಲ್ ಮ್ಯಾಕ್ ಆಡಮ್ಸ್, ಸ್ಟಾನ್ಲಿ ಟುಸಿ ಮತ್ತು ಡೆಮಿ ಮೂರ್ ಅವರಂತಹ ಪ್ರಸಿದ್ಧ ಕಲಾವಿದರೊಂದಿಗೆ ಈ ಹಿರಿಮೆಯನ್ನು ಹಂಚಿಕೊಂಡಿದ್ದಾರೆ. ಹಲವಾರು ಅಂತರರಾಷ್ಟ್ರೀಯ ಸೆಲೆಬ್ರಿಟಿಗಳನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿದ್ದರೂ, ದೀಪಿಕಾ ಏಕೈಕ ಭಾರತೀಯ ನಟಿಯಾಗಿದ್ದಾರೆ.