ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾದಮೇಲೆ, ಮಕ್ಕಳಾದಮೇಲೆ ಸಿನಿಮಾ ನಟಿಯರಿಗೆ ಅವಕಾಶ ಕಮ್ಮಿ ಅನ್ನೋ ಕಾಲವೊಂದಿತ್ತು. ಆದರೆ ಇದೀಗ ನಟಿಯರಿಗೆ ಅವರ ನಟನೆಯ ಅನುಸಾರ ಸಂಭಾವನೆ ಸಿಗುತ್ತಿದೆ.
ಹೌದು, ದೀಪಿಕಾ ಪಡುಕೋಣೆ ಪ್ರಭಾಸ್ ಜೊತೆಗಿನ ಸಿನಿಮಾಕ್ಕೆ ಬರೋಬ್ಬರಿ 25 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.
ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಮರು ಎಂಟ್ರಿ ಕೊಡಲು ಸಜ್ಜಾಗಿದ್ದು, ದೇಹತೂಕ ಇಳಿಸುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ದೀಪಿಕಾ ಪಡುಕೋಣೆಗೆ ಎರಡು ಸಿನಿಮಾ ಆಫರ್ಗಳು ಬಂದಿವೆ. ಮೊದಲನೇಯದ್ದು ಶಾರುಖ್ ಖಾನ್ ನಟನೆಯ ‘ಕಿಂಗ್’ ಮತ್ತು ಎರಡನೇಯದ್ದು ಪ್ರಭಾಸ್ ನಟನೆಯ ‘ಸ್ಪಿರಿಟ್’ ಎರಡೂ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ ನಟಿ ದೀಪಿಕಾ ಪಡುಕೋಣೆ.
ಅದರಲ್ಲಿಯೂ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾಕ್ಕೆ ಭಾರಿ ಸಂಭಾವನೆಯನ್ನು ದೀಪಿಕಾ ಪಡುಕೋಣೆ ಪಡೆದುಕೊಳ್ಳುತ್ತಿದ್ದಾರೆ. ‘ಸ್ಪಿರಿಟ್’ ಸಿನಿಮಾಕ್ಕೆ ದೀಪಿಕಾ ಪಡುಕೋಣೆಗೆ 25 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಭಾರತದ ಇನ್ಯಾವುದೇ ನಟಿಯರು ಯಾವುದೇ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಸಂಭಾವನೆಯನ್ನು ಈವರೆಗೆ ಪಡೆದಿದ್ದಲ್ಲ. ಆಲಿಯಾ ಭಟ್ಗೆ ಸಹ 10 ರಿಂದ 15 ಕೋಟಿ ಸಂಭಾವನೆ ನೀಡಲಾಗುತ್ತದೆ. ಆದರೆ ದೀಪಿಕಾ ತಮ್ಮ ಕಮ್ ಬ್ಯಾಕ್ ಸಿನಿಮಾಕ್ಕೆ 25 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ.