ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ದೀಪಿಕಾ ದಾಸ್ ಪ್ರೈವೇಟ್ ಆಗಿ ಗೋವಾದಲ್ಲಿ ಮದುವೆಯಾಗಿದ್ದಾರೆ. ಇದೀಗ ನೆಂಟರು ಹಾಗೂ ಫ್ರೆಂಡ್ಸ್‌ಗಾಗಿ ರಿಸೆಪ್ಷನ್ ಮಾಡಿಕೊಂಡಿದ್ದಾರೆ.
ಮದುವೆಯಲ್ಲಿ ಸಿನಿ ಗಣ್ಯರು ಆಗಮಿಸಿ ನವ ಜೋಡಿಗೆ ಹರಸಿದ್ದಾರೆ. ನಟಿ ದೀಪಿಕಾ ದಾಸ್ ಸದ್ದಿಲ್ಲದೇ ಮದುವೆಯಾಗಿದ್ದು ಎಷ್ಟೊಂದು ಜನಕ್ಕೆ ಆಶ್ಚರ್ಯ ಆಗಿತ್ತು.
ಇದೀಗ ದೀಪಿಕಾ ರಿಯಲ್ ಎಸ್ಟೇಟ್ ಮತ್ತು ಐಟಿ ಉದ್ಯಮಿ ಪತಿ ದೀಪಕ್ ಬಗ್ಗೆ ಮಾತನಾಡಿದ್ದಾರೆ. ನಾಲ್ಕು ವರ್ಷಗಳಿಂದ ಸ್ನೇಹಿತರಾಗಿದ್ದ ದೀಪಿಕ್ ದೀಪಿಕಾ ಒಂದು ವರ್ಷದ ಹಿಂದೆ ಕಮಿಟ್ ಆಗಿದ್ದರಂತೆ. ಒಂದು ವರ್ಷದ ಕಮಿಟ್‌ಮೆಂಟ್ ನಂತರ ಮದುವೆ ನಿರ್ಧಾರಕ್ಕೆ ಬಂದಿದ್ದು, ಹಿರಿಯರ ಹಾಗೂ ಆತ್ಮೀಯರ ಸಮ್ಮುಖದಲ್ಲಿ ಗೋವಾದಲ್ಲಿ ಅದ್ಧೂರಿ ವಿವಾಹವಾಗಿದ್ದಾರೆ.
ದೀಪಕ್ ತುಂಬಾ ಮೃದು ಸ್ವಭಾವದವರು, ಮಾತು ಕಡಿಮೆ , ಕನ್ನಡದ ಗೌಡ ಹುಡುಗ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.