ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ನಲ್ಲಿ ಈಗ ಮದುವೆ ಸಂಭ್ರಮ. ಇತ್ತೀಚೆಗೆ ನಟಿ ಅದಿತಿ ಹಸೆಮಣೆ ಏರಿದ ಬೆನ್ನಲ್ಲೇ ಇದೀಗ ಮತ್ತೊಂದು ಜೋಡಿ ಹಸಮಣೆ ಏರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಅವರೇ ನಟಿ ಹರಿಪ್ರಿಯಾ ಮತ್ತು ವಸಿಷ್ಠ.
ಇದೀಗ ಈ ಜೋಡಿ ಆಪ್ತರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿಹಾರಿದಾಡುತ್ತಿದೆ.
ಇತ್ತೀಚೆಗಷ್ಟೇ ದುಬೈನಲ್ಲಿ ಕೈ ಕೈ ಹಿಡಿದು ಓಡಾಡಿದ್ದ ಈ ಜೋಡಿಯ ಫೋಟೋ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು.
ತಮ್ಮ ಲವ್ ಸ್ಟೋರಿ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿದ್ದಾರೆ. ವಸಿಷ್ಠ ಅವರಿಗಿಂತ ಹರಿಪ್ರಿಯಾ ಮೂರು ವರ್ಷ ಸಣ್ಣವರು. ಇಬ್ಬರು ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.